Rava Laddu/Rave Vunde Recipe(ರವೆ ಉಂಡೆ ಮಾಡುವ ವಿಧಾನ – ಪಾಕವಿಲ್ಲದೆ)

ನಮಸ್ಕಾರ ನನ್ನ ಪ್ರೀತಿಯ ಓದುಗರಿಗೆ,

ಸ್ವಲ್ಪ ತಿಂಗಳ ಬಿಡುವಿನ ನಂತರ ಬ್ಲಾಗ್ ಗೆ ವಾಪಸ್ ಆಗಿದ್ದೇನೆ ಈ ಸಿಹಿ ತಿಂಡಿಯ ಜೊತೆಗೆ..,💐💐

1497495047241

ಎಲ್ಲರಿಗೂ ಸಾಮಾನ್ಯವಾಗಿ ರವೆ ಉಂಡೆಯ ರೆಸಿಪಿ ಗೊತ್ತೇ ಇರುತ್ತದೆ… ಇದು ಬಹಳಾ ಹಳೆ ಕಾಲದ ತಿಂಡಿ.. ನಮ್ಮ ಮನೆಯಲ್ಲಿ ನಾವು ಮಾಡೋ ವಿಧಾನ ತಿಳಿಸುತ್ತಿದ್ದೇನೆ… ಮಾಡಿ ನೋಡಿ ಹೇಗಿತ್ತೆಂದು ತಿಳಿಸಲು ಮರೆಯಬೇಡಿ…

IMG_20200507_175800

ಬೇಕಾಗುವ ಸಾಮಗ್ರಿಗಳು ಹೀಗಿವೆ/ Ingredients Needed::-

ಸಣ್ಣ ರವೆ ಅಥವಾ ಚಿರೋಟಿ ರವೆ/ Sooji Rava – 1 ಕಪ್
ಸಕ್ಕರೆ ಪುಡಿ/Sugar powder – 1 ಕಪ್
ಒಣ ಕೊಬ್ಬರಿ/ Grated Dry Coconut -ಅರ್ಧ ಗಿಟುಕು ತುರಿ
ಏಲಕ್ಕಿ, ಲವಂಗ ಸಕ್ಕರೆ ಜೊತೆಗೆ ಪುಡಿ ಮಾಡಿದ್ದು
ತುಪ್ಪ Ghee – ಕಾಲು ಕಪ್ ಅಥವಾ ನಾಲ್ಕು ಸ್ಪೂನ್
ಹಾಲು Milk – ಕಾಲು ಕಪ್ ಅಥವಾ ನೋಡಿಕೊಂಡು
ಒಣದ್ರಾಕ್ಷಿ, ಗೋಡಂಬಿ ತುಪ್ಪದಲ್ಲಿ ಕರಿಯಲು( Little Raisins , Cashews fried in Ghee)

IMG_20180902_093525

ವಿಧಾನ/ Method of Making Laddus

ಮೊದಲಿಗೆ ಸ್ವಲ್ಪ ತುಪ್ಪದಲ್ಲಿ ದ್ರಾಕ್ಷಿ, ಗೋಡಂಬಿ ಕರಿದುಕೊಳ್ಳಿ, ತೆಗೆದಿಡಿ.

ನಂತರ ಅದೇ ಬಾಣಲೆಯಲ್ಲಿ ಈಗ ಚಿರೋಟಿ ರವೆ ಹಾಕಿ ಹುರಿದು ಬೆಚ್ಚಗೆ ಮಾಡಿ ಅಂದರೆ ಒಂದು ಹತ್ತು ಹನ್ನೆರಡು ನಿಮಿಷ ಹುರಿಯಿರಿ, ಹಸಿ ವಾಸನೆ ಹೋದರೆ ಸಾಕು.. ಅದಕ್ಕೆ ತುರಿದ ಒಣಕೊಬ್ಬರಿ ಹಾಕಿ ಒಂದೆರಡು ನಿಮಿಷ ಹುರಿದುಕೊಳ್ಳಿ…

IMG_20200507_175733

ನಂತರ, ಸಕ್ಕರೆ ಪುಡಿ ಸೇರಿಸಿ, ಹುರಿದ ದ್ರಾಕ್ಷಿ, ಗೋಡಂಬಿ ಸೇರಿಸಿ , ಎಲ್ಲವನ್ನೂ ಚೆನ್ನಾಗಿ ಕಲಸಿ… ಎರಡು ನಿಮಿಷ ಬಿಟ್ಟು ಉಂಡೆ ಕಟ್ಟಿ… ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ಉಂಡೆ ಕಟ್ಟಿರಿ…

ಉಂಡೆ ಕಟ್ಟಲು ಸ್ವಲ್ಪ ಒಣಗಿದಂತೆ ಅನಿಸಿದ್ರೆ, ಚೆನ್ನಾಗಿ ಕುದ್ದಿಸಿ ,ಬೆಚ್ಚಗೆ ಆಗಿರುವ ಹಾಲು /ನೀರು ಅಥವಾ  ಇನ್ನು ಸ್ವಲ್ಪ ತುಪ್ಪ ಸೇರಿಸಿ ಉಂಡೆ ಕಟ್ಟಿರಿ…

1497494577850

ಇದೆ ವಿಧಾನದಲ್ಲಿ ಬನ್ಸಿ ರವೆ ಉಪಯೋಗಿಸಿ ಮಾಡಬಹುದು… ಅದಕ್ಕೆ ಸ್ವಲ್ಪ ಹುರಿಯುವ ಸಮಯ ಹೆಚ್ಚು… ಬೇಕಿದ್ದಲ್ಲಿ ಬಾದಾಮಿ, ಪಿಸ್ತಾ ಈ ರೀತಿಯಲ್ಲಿ ಒಣ ಹಣ್ಣುಗಳನ್ನು ಸೇರಿಸಿಕೊಳ್ಳಬಹುದು…. ಆರಿದ ನಂತರ ಡಬ್ಬದಲ್ಲಿ ತುಂಬಿಡಿ…

ಹೇಗಿದೆ ಅಂತ ಮಾಡಿ, ನೋಡಿ ತಿಳಿಸಿರಿ… ☺☺

One thought on “Rava Laddu/Rave Vunde Recipe(ರವೆ ಉಂಡೆ ಮಾಡುವ ವಿಧಾನ – ಪಾಕವಿಲ್ಲದೆ)

  1. Pingback: Deepavali – ದೀಪಾವಳಿ | Life is Marvellous

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.