Tambittu Recipe (ತಂಬಿಟ್ಟು ಮಾಡುವ ವಿಧಾನ)

ನನ್ನ ಪ್ರೀತಿಯ ಓದುಗ ಬಾಂಧವರಿಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.. ಶ್ರೀ ವರಮಹಾಲಕ್ಷ್ಮಿಯು ನಿಮ್ಮೆಲ್ಲರ ಬಾಳಲ್ಲಿ ಸುಖ, ಶಾಂತಿ, ಸಂಯಮ, ನೆಮ್ಮದಿ ಹಾಗೂ ಸಕಲೈಶ್ವರ್ಯಗಳನ್ನು ಕರುಣಿಸಲಿ ಎಂಬುದು ನನ್ನ ಹಾರೈಕೆ… 💐💐

1501737227211

ನಮ್ಮ ಮನೆ ಎಳ್ಳಿನ ಚಿಗುಳಿ ಹಾಗೂ ಅಕ್ಕಿ ತಂಬಿಟ್ಟು(ಚಿತ್ರದಲ್ಲಿ ಮೇಲಿನದು ಅಕ್ಕಿ ತಂಬಿಟ್ಟು )..

ಹಬ್ಬಕ್ಕಾಗಿ ಒಂದು ಸರಳ ಹಾಗೂ ಮುಖ್ಯವಾದ ಸಿಹಿ ತಿಂಡಿ  ಈ ತಂಬಿಟ್ಟು.. ನಮ್ಮ ಬೆಂಗಳೂರು ಕಡೆ ಪ್ರಸಾದಕ್ಕಾಗಿ ಶ್ರಾವಣ ಶನಿವಾರಕ್ಕೆ, ಮಂಗಳ ಗೌರಿಗೆ, ವರಮಹಾಲಕ್ಷ್ಮಿಗೆ, ಸ್ವರ್ಣ ಗೌರಿಗೆ, ತಂಬಿಟ್ಟು ಬಹಳ ವಿಶೇಷ.. ನೈವೇದ್ಯ ಹಾಗೂ ದೀಪದಾರತಿ ಗೆ ಬಹಳ ಮುಖ್ಯ..

ಅಕ್ಕಿ ಹಾಗೂ ಗೋಧಿ ಎರಡೂ ಹಿಟ್ಟಿನಲ್ಲಿ ಮಾಡುತ್ತೇವೆ..

ಇಲ್ಲಿ ಅಕ್ಕಿ ತಂಬಿಟ್ಟು ರೆಸಿಪಿ ಹಾಕುತ್ತಿದ್ದೀನಿ

ಬೇಕಾಗುವ ಸಾಮಗ್ರಿಗಳು

ಒಂದು ಕಪ್ ತೊಳೆದ ಅಕ್ಕಿ ಹಿಟ್ಟು
ಅರ್ಧ ಕಪ್ ಬೆಲ್ಲದ ಪುಡಿ ಅಥವಾ ಕುಟ್ಟಿದ ಬೆಲ್ಲ
ಏಲಕ್ಕಿ ಎರಡು ಪುಡಿ ಮಾಡಿದ್ದು
ಬೇಕಿದ್ದಲ್ಲಿ ಒಣ ಕೊಬ್ಬರಿ ತುರಿ ಅರ್ಧ ಕಪ್ ಅಥವಾ ಸ್ವಲ್ಪ ಹಸಿ ಕೊಬ್ಬರಿ
ತುಪ್ಪದಲ್ಲಿ ಕರಿದ ದ್ರಾಕ್ಷಿ, ಗೋಡಂಬಿ

ಮಾಡೋ ವಿಧಾನ

ಒಂದು ಬಾಣಲೆಯಲ್ಲಿ ಅರ್ಧ ಕಪ್ ಬೆಲ್ಲ, ಅರ್ಧ ಕಪ್ ನೀರು ಹಾಕಿ,ಬೆಲ್ಲದ ಪಾಕ ಅಂದರೆ ಪಾಕದ ನೀರು ತಯಾರಾಗಿ, ಕುದಿ ಬಂದ ತಕ್ಷಣ,ಒಣಕೊಬ್ಬರಿ ತುರಿ ಹಾಕಿ , ಕಲಸಿ, ಅಕ್ಕಿ ಹಿಟ್ಟನ್ನು ಹಾಕಿ ಚೆನ್ನಾಗಿ ಕೆದಕಿ..

ನಂತರ ಸ್ವಲ್ಪ ತುಪ್ಪದಲ್ಲಿ ಕರಿದ ಒಣ ದ್ರಾಕ್ಷಿ, ಗೋಡಂಬಿ ಹಾಕಿ ಚೆನ್ನಾಗಿ ಕಲಸಿ, ಕಡೆಯಲ್ಲಿ ಏಲಕ್ಕಿ ಪುಡಿ ಹಾಕಿ.

ಎಲ್ಲವನ್ನು ಚೆನ್ನಾಗಿ ಕಲಸಿ ಒಂದೆರಡು ನಿಮಿಷ ಚೆನ್ನಾಗಿ ಬೇಯಲು, ಹೊಂದಲು ಬಿಡಿ… ಒಲೆ ಆಫ್ ಮಾಡಿ . ಸ್ವಲ್ಪ ಸಮಯದ ನಂತರ, ತಣ್ಣಗಾದ ಮೇಲೆ ಉಂಡೆ ಕಟ್ಟಿ..

ಗೋಧಿಹಿಟ್ಟು ಉಪಯೋಗಿಸಿದರೂ ಇದೆ ವಿಧಾನ , ಗೋಧಿ ಹಿಟ್ಟನ್ನು ಚೆನ್ನಾಗಿ ಘಮ್ಮೆನ್ನುವ ಹಾಗೆ ಹುರಿದು ಕೊಂಡು, ತಣ್ಣಗಾದ ನಂತರ , ಉಂಡೆ ತಯಾರಿಸಿಕೊಳ್ಳಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.