Deepavali festival (ದೀಪಾವಳಿ ಹಬ್ಬದ ಆಚರಣೆ ವಿವರ)

ನನ್ನ ಪ್ರೀತಿಯ ಓದುಗರಿಗೆ ದೀಪಾವಳಿಯ ಹಾರ್ದಿಕ ಶುಭಾಶಯಗಳು 💐💐🌺🌺🌻🌻🙂

ಅಸತೊಮ ಸದ್ಗಮಯ
ತಮಸೋಮ ಜ್ಯೋತಿರ್ಗಮಯ
ಮೃತ್ಯೋರ್ಮ ಅಮೃತಮ್ಗಮಯ
ಓಂ ಶಾಂತಿ ಶಾಂತಿ ಶಾಂತಿಹಿ…

ದೀಪಾವಳಿ ಹಬ್ಬದ ಅರ್ಥ ಹಾಗೂ ಆಚರಣೆ ಮಹತ್ವ:::-

ದೀಪಾವಳಿ ಬೆಳಕಿನ ಹಬ್ಬ… ಎಲ್ಲೆಡೆಯೂ ಸಾಲು ಸಾಲಾಗಿ ದೀಪಗಳನ್ನು ಹಚ್ಚಲಾಗುತ್ತದೆ…

ಕತ್ತಲಿನಿಂದ ಬೆಳಕಿನೆಡೆಗೆ ಅಂದರೆ ಅಂಧಕಾರದಿಂದ  ಜ್ಞಾನದ ಕಡೆ ಹೋಗುವುದನ್ನು ಸಾರುವುದೇ ದೀಪಾವಳಿ.. ಈ ಅಂಧಕಾರ , ಕತ್ತಲು ಅಂದರೆ ಅಜ್ಞಾನ ಆಗಿರಬಹುದು, ಕಷ್ಟಗಳೂ ಆಗಿರಬಹುದು..
ಈ ದೀಪಾವಳಿಯ ದಿನ ಮಹಾಲಕ್ಷ್ಮಿ ಜನಿಸಿದಳು ಎಂಬ ಪ್ರತೀತಿ ಇದೆ, ಹಾಗೆ ಕೃಷ್ಣನು ನರಕಾಸುರನನ್ನು ಸಂಹರಿಸಿದ ದಿನವೇ ನರಕ ಚತುರ್ದಶಿ , ಬಲಿಯ ಅಹಂಕಾರಕ್ಕೆ ಪಾಠ ಕಲಿಸಲು ಮಹಾವಿಷ್ಣುವು, ವಾಮನಾವತಾರ ತಾಳಿಬಂದದ್ದನ್ನು ಸ್ಮರಿಸಲು ಬಲಿಪಾಡ್ಯಮಿ ಆಚರಿಸಲಾಗುತ್ತದೆ…

Deepavali celebration comes during ashwayuja maasa or during October – November month and celebration across Karnataka remains for 4 days..

ನಾಲ್ಕು ದಿನಗಳ ದೀಪಾವಳಿ ಆಚರಣೆಯ ವಿವರ ಹೀಗಿದೆ –

First day is *Neeru tumbuva habba- ನೀರು ತುಂಬುವ ಹಬ್ಬ* — washing and cleaning the bathrooms, filling all vessels with water, cleaning boilers , applying arishina kumkuma flowers and drawing rangolis..

ಮುಂಚಿನ ಕಾಲದಲ್ಲಿ ಎಲ್ಲರ ಮನೆಯಲ್ಲಿ ಹಂಡೆ/ಕೊಳಗ/ಹಿತ್ತಾಳೆ ತಪ್ಪಲೆ/ತಾಮ್ರದ ಬಿಂದಿಗೆ ಇವುಗಳಲ್ಲಿ ಒಲೆ ಉರಿಸಿ (ಸೌದೆ,ತೆಂಗಿನ ಚಿಪ್ಪು ಉಪಯೋಗಿಸಿ) , ನೀರು ಕಾಯಿಸಿ ಸ್ನಾನ ಮಾಡುತ್ತಿದ್ದರು… ಆಗ ಸ್ನಾನದ ಕೋಣೆ ಯನ್ನೆಲ್ಲ ತೊಳೆದು, ಸಾರಿಸಿ, ರಂಗೋಲಿ ಕೆಮ್ಮಣ್ಣು ಇವುಗಳಿಂದ ಅಲಂಕರಿಸಿ, ಹೂವ ಇಟ್ಟು ಪೂಜೆ ಮಾಡಲಾಗುತ್ತಿತ್ತು…

ಈಗಿನ ದಿನಗಳಲ್ಲಿ, ಗ್ಯಾಸ್ ಸ್ಟೌವ್, ಬಾಯ್ಲರ್,ಗೀಸರ್ ಅಥವಾ ಸೋಲಾರ್ ಇರುತ್ತದೆ.. ಹಾಗಾಗಿ ಸ್ನಾನದ ಕೋಣೆಯನ್ನು ಸ್ವಚ್ಛ ಮಾಡಿ, ಎಲ್ಲಾ ಪಾತ್ರೆಗಳಲ್ಲಿ ನೀರನ್ನು ತುಂಬಿ ಪೂಜೆ ಮಾಡುತ್ತೇವೆ. ಹೊಸ್ತಿಲು ಗಳಲ್ಲಿ ರಂಗವಲ್ಲಿ ಬರೆಯುತ್ತೇವೆ. ಇವೆಲ್ಲ ನಾವು ಉಪಯೋಗಿಸುವ ವಸ್ತುಗಳಿಗೆ ನಾವು ಕೊಡೋ ಬೆಲೆ ಅಥವಾ ಮನ್ನಣೆ ಎಂದು ಕೊಳ್ಳಬಹುದು ಎಂಬುದು ನನ್ನ ಅನಿಸಿಕೆ..

2ನೆ day is Naraka Chaturdashi ನರಕ ಚತುರ್ದಶಿ, signifies the day when Lord Krishna killed a demon named Narakaasura. All the members of the family take head bath.. Habbada Adige is cooked and festive meal is consumed by entire family members..

ಕೃಷ್ಣನು ನರಕಾಸುರನನ್ನು ಕೊಂದ ದಿನವನ್ನು ನರಕ ಚತುರ್ದಶಿ ಎಂದು ಆಚರಿಸುತ್ತಾರೆ..

ಎಲ್ಲರೂ ಎಣ್ಣೆ ಅಭ್ಯಂಜನ ಮಾಡುವುದು ಈ ದಿನದ ರೂಢಿ… ಹಬ್ಬದ ಅಡುಗೆ ಮಾಡಿ, ಹೊಸ ಬಟ್ಟೆ ಧರಿಸಿ, ಪಟಾಕಿ ಸಿಡಿಸುವುದು, ಮನೆಮಂದಿಯೆಲ್ಲ ಕೂತು ಹಬ್ಬದ ಊಟ ಸವಿಯುವುದು ಈ ದಿನದ ವಿಶೇಷ.. ಈಗೀಗ ಮುಂಚಿನಷ್ಟು ಪಟಾಕಿ ಯಾರು ಸಿಡಿಸುವುದಿಲ್ಲ.. ಯಾಕೆಂದರೆ ಅದರ ಹೊಗೆ ಪರಿಸರಕ್ಕೆ ಅಪಾಯಕಾರಿ ಹಾಗೂ ಬೆಂಕಿ ಅವಘಡ ಸಂಭವಿಸುತ್ತದೆ.. ಹಬ್ಬದ ಸಂಭ್ರಮವೆಂದು ಒಂದೆರಡು ಮತಾಪುಗಳನ್ನ/ಭೂ ಚಕ್ರವನ್ನು ಹಚ್ಚುತ್ತಾರೆ… ಹಾಗೂ ಈಗೀಗ ಪರಿಸರ ಸ್ನೇಹಿ ಅಥವಾ ರಾಸಾಯನಿಕ ರಹಿತ ಪಟಾಕಿಗಳು ಸಹ ಮಾರುಕಟ್ಟೆಯಲ್ಲಿ ಲಭ್ಯವಿದೆ…(go green!!!)

3rd day is Deepavali amavasye ದೀಪಾವಳಿ ಅಮಾವಾಸ್ಯೆ, special pooja to Goddess Lakshmi ಲಕ್ಷ್ಮಿ ಪೂಜಾ is performed for wealth , health, peace and prosperity..

IMG_20191026_103606

ನಾವು ಈ ದಿನ ಧನಲಕ್ಷ್ಮಿ ಆರಾಧನೆ ( ಅಮಾವಾಸ್ಯೆ ಲಕ್ಷ್ಮಿ ಪೂಜೆ ಹಾಗೂ ಕುಬೇರ ಪೂಜೆ ) ಮಾಡುತ್ತೇವೆ.. ನಾವು ಲಕ್ಷ್ಮೀದೇವಿ ಪಟಕ್ಕೇ ಪೂಜೆ ಮಾಡುತ್ತೇವೆ .. ಅಂಗಡಿ ವ್ಯಾಪಾರಿಗಳು ಈ ದಿನ ಧನಲಕ್ಷ್ಮಿ ಪೂಜೆ ವಿಶೇಷವಾಗಿ ಮಾಡುತ್ತಾರೆ.. ಸಾಮಾನ್ಯವಾಗಿ ಉತ್ತರ ಭಾರತದವರಿಗೆ ಈ ದಿನ ಬಹಳ ವಿಶೇಷವಾಗಿರುತ್ತದೆ…

1508425671678

4th day is Balipaadyami or Deepavali paadya ಬಲಿಪಾಡ್ಯಮಿ ( ಬಲಿ ಪ್ರತಿಪದ/ಕಾರ್ತಿಕ ಶುದ್ಧ ಪಾಡ್ಯ ) , the day when Lord Vishnu came as ,Vaamana (ವಾಮನಾವತಾರ) and taught a good lesson to King Bali , to not to be too egoistic…

ಕೆಲವು ಸಂಪ್ರದಾಯಗಳಲ್ಲಿ ಇದೆ ದಿನ ಬಲೀಂದ್ರ ಪೂಜೆ ಮಾಡುತ್ತಾರೆ…ನಮ್ಮಲ್ಲಿ ಬಲೀಂದ್ರ ಪೂಜೆ ಇಲ್ಲವಾದರೂ,ನಾವು ಸಗಣಿ ಅಥವಾ ಗೋಮಯ ತಂದು, ಮನೆಯ ಎಲ್ಲಾ ಕೋಣೆಗಳ ದ್ವಾರದ ಹೊಸ್ತಿಲು ಬದಿಗಳಲ್ಲಿ ಸ್ವಲ್ಪ ಸಗಣಿ ಇಟ್ಟು (ಉಂಡೆಯ ರೀತಿ), ಅದರ ಮೇಲೆ ಶಾಮಂತಿಗೆ/ಚಂಡು ಹೂವ ಸಿಕ್ಕಿಸಿ ಇಡುತ್ತೀವಿ.. ಇದನ್ನೇ ಪೂಜೆ ಮಾಡುತ್ತೇವೆ..

ಎಲ್ಲೆಲ್ಲೂ ಸಾಲು ಸಾಲಾಗಿ ದೀಪಗಳನ್ನು ಜೋಡಿಸಲಾಗುತ್ತದೆ… ಮಣ್ಣಿನ ದೀಪಗಳನ್ನು ಕೊಂಡು ಅದಕ್ಕೆ ವಿವಿಧ ಬಣ್ಣಗಳ ಪೈಂಟ್ ಗಳಿಂದ  ಅಲಂಕರಿಸಿದರೆ ಬಹಳ ಚೆನ್ನಾಗಿ ಕಾಣುತ್ತದೆ.. 

ಮನೆಯ ಮುಂಬಾಗಿಲು ಹಾಗೂ ತುಳಸಿ ಕಟ್ಟೆ ಮುಂದೆ ಎರಡು ದೀಪಗಳನ್ನು ಕಾರ್ತಿಕ ಮಾಸದ ಪೂರ್ತಿ ಹಚ್ಚಲಾಗುತ್ತದೆ…

IMG_20191027_183103

ನಮ್ಮ ಬೆಂಗಳೂರಿನ ರಸ್ತೆಗಳು ದೀಪಾವಳಿಯ ಸಮಯದಲ್ಲಿ… ನೋಡಲು ಎಷ್ಟು ಸುಂದರ !!ಈಗೀಗ ಬೇಕಾದಷ್ಟು ವಿಧ, ಬಣ್ಣ, ಆಕಾರಗಳುಳ್ಳ ಹಣತೆಗಳು ಲಭ್ಯ… ( Below pic shows the snap of earthen lamps sold in Namma Bengaluru streets, which are in various beautiful shapes, sizes ,colors)

IMG_20191028_193014

Some shlokas and message for my dear readers::-

*ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನಸಂಪದಂ
*ಶತ್ರು ಬುದ್ಧಿ ವಿನಾಶಾಯ
*ದೀಪಜ್ಯೋತಿರ್ನಮೋsಸ್ತುತೆ।।

*ದೀಪಜ್ಯೋತಿಃ ಪರಬ್ರಹ್ಮ ದೀಪಜ್ಯೋತಿರ್ಜನಾರ್ದನ ದೀಪೋ ಹರತಿ ಪಾಪಾನಿ ಸಂಧ್ಯಾದೀಪಂ ನಮೋಸ್ತುತೇ ॥*

 

*ಸಮೃದ್ಧಿ, ಸಂಪ್ರೀತಿ, ಸಮಾನತೆ, ಸೌಜನ್ಯತೆ ದೀಪದ ಬೆಳಕಿನಂತೆ ಎಲ್ಲೆಡೆ ಹರಡಲಿ.*
*ನಿಮಗೆ, ನಿಮ್ಮ ಕುಟುಂಬದವರಿಗೆ ಈ*
*ದೀಪಾವಳಿ ಮಂಗಳವನ್ನು ಉಂಟು ಮಾಡಲಿ ಎಂದು ಹಾರೈಸುತ್ತಾ…*

*ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು**Once again, Happy Deepavali to my reader family !!

Below are the sweets received for Deepavali from my uncle family.. :-

IMG_20191025_105106

Below you can take a look at sweet recipes prepared for deepavali @ my home  ::-

Rave Vunde recipe

Maida burfi recipe

Coconut burfi recipe

Soft Mysore Pak recipe

Seven cup burfi recipe

Gulaab Jaamoon recipe 

And you can find the list of devotional songs and hymns here::-
Devotional Songs and Shlokas

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.