Poppy seeds kheer recipe (ಗಸಗಸೆ ಪಾಯಸ ಮಾಡುವ ವಿಧಾನ)

ನನ್ನ ಪ್ರೀತಿಯ ಓದುಗರಿಗೆ ಕನ್ನಡ ರಾಜ್ಯೋತ್ಸವ ಹಾಗೂ ಉತ್ಥಾನ ದ್ವಾದಶಿ ಹಬ್ಬದ ಹಾರ್ದಿಕ ಶುಭಾಶಯಗಳು 💐💐

ನಾಡ ಹಬ್ಬ ರಾಜ್ಯೋತ್ಸವ ಹಾಗೂ ತುಳಸಿ ಹಬ್ಬ ಎರಡರ ಸಲುವಾಗಿ ಮಾಡಿದ ಪಾಯಸ.. ತಲೆಗೆ ಎಣ್ಣೆ ಅಭ್ಯಂಜನ, ನಂತರ ಈ ಪಾಯಸವನ್ನು ಕುಡಿದರೆ ಒಳ್ಳೆ ನಿದ್ದೆ ಬರುವುದು ಖಚಿತ, ಹಾಗೆ ಬಾಯಿ ಹುಣ್ಣಿಗೂ ಮನೆ ಮದ್ದು ಈ ಪಾಯಸ ಸೇವನೆ, ದೇಹಕ್ಕೆ ತಂಪು..

ನಮ್ಮ ಮನೆಯಲ್ಲಿ ಮಾಡುವ ವಿಧಾನ

ಬೇಕಾದ ಪದಾರ್ಥಗಳು:::
ಗಸಗಸೆ – 1 ಟೀ ಸ್ಪೂನ್
ಅಕ್ಕಿ – 2 ಟೀ ಸ್ಪೂನ್
ಒಣ ಕೊಬ್ಬರಿ ತುರಿ – ಅರ್ಧ ಗಿಟುಕು
ಬೆಲ್ಲ – 3/4 ಕಪ್
ಏಲಕ್ಕಿ 3
ಬೇಕಾದರೆ ದ್ರಾಕ್ಷಿ, ಗೋಡಂಬಿ

IMG_20171101_151354

ವಿಧಾನ

ಮೊದಲು ಒಂದು ಬಾಣಲೆಯಲ್ಲಿ, ಅಕ್ಕಿ ಹಾಗೂ ಗಸಗಸೆ ಹಾಕಿ ಹುರಿಯಿರಿ- ಬೆಚ್ಚಗೆ ಮಾಡಿಕೊಳ್ಳಿ.. ನಂತರ ತಣ್ಣಗೆ ಆದಮೇಲೆ ಒಣಕೊಬ್ಬರಿ ತುರಿ, ಏಲಕ್ಕಿ, ಹುರಿದು ತಣ್ಣಗಾದ ಅಕ್ಕಿ-ಗಸಗಸೆ ಎಲ್ಲ ಹಾಕಿ ನುಣ್ಣಗೆ ಒಣ ಪುಡಿ ಮಾಡಿ ನಂತರ ನೀರು ಹಾಕಿ ನುಣ್ಣಗೆ ಮಿಶ್ರಣ ಮಾಡಿರಿ..

ಈ ಕಡೆ ಬೆಲ್ಲ ಸ್ವಲ್ಪ ನೀರು ಹಾಕಿ, ಬೆಲ್ಲ ಕರಗಿದ ನಂತರ ಗಸಗಸೆ ಮಿಶ್ರಣ ಹಾಕಿ 2 ಕುದಿ ಬರಲಿ..ನಂತರ ಹೀಗೆಯೇ ಬಡಿಸಬಹುದು ಅಥವಾ ಸ್ವಲ್ಪ ಕಾಯಿಸಿ, ಆರಿಸಿ, ತಣ್ಣಗಾದ ಹಾಲು ಹಾಕಿ 1 ಕುದಿ ಬಂದ ನಂತರ ಬಡಿಸಬಹುದು…

ಬೆಲ್ಲ ಹಾಕಿದರೆ ಬೆಲ್ಲದ ಬಣ್ಣ, ಹಾಲು ಸೇರಿಸಿದರೆ ಬಿಳೀ ಬಣ್ಣ ಬರುತ್ತದೆ.. ಬೇಕಾದರೆ ನೀರಿನಲ್ಲಿ ಸೇರಿಸಿ ಫುಡ್ ಕಲರ್ಸ್ ಅಥವಾ ಕೇಸರಿ ಹಾಕಬಹುದು..

ರುಚಿಯಾದ ಈ ಪಾಯಸ, ಆರೋಗ್ಯಕ್ಕೂ ಬಹಳ ಒಳ್ಳೆಯದು, ತಂಪು..

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.