Makara Sankranti habba( ಮಕರ ಸಂಕ್ರಾಂತಿ ಹಬ್ಬ)

ನನ್ನ ಪ್ರೀತಿಯ ಓದುಗ ಬಾಂಧವರಿಗೆ ಮಕರ ಸಂಕ್ರಾಂತಿಯ ಹಾರ್ಧಿಕ ಶುಭಾಶಯಗಳು… 💐💐

ಈ ಭೋಗಿ ಹಬ್ಬ ಮತ್ತು ಸಂಕ್ರಾಂತಿ ನಿಮ್ಮ ಮನೆ ಮನಗಳಲ್ಲಿ ಸುಖ, ಶಾಂತಿ, ಸಂಯಮ, ಸಮೃದ್ಧಿಗಳನ್ನು ತರಲಿ..

Here’s wishing all my dear readers a very happy, healthy, prosperous, peaceful , Bhogi and Makara Sankranti… 🙂 💐💐💐

ಸಂಕ್ರಾಂತಿ ಹಬ್ಬವನ್ನು ಹಲವು ವಿಶೇಷಗಳಿಗೆ ಆಚರಿಸಲಾಗುತ್ತದೆ::-

ಮೊದಲನೆಯದು, ಸುಗ್ಗಿಯ ಕಾಲದಲ್ಲಿ ಸಂಕ್ರಾಂತಿ ಬರುತ್ತದೆ.. ಅಂದರೆ ರೈತರು ತಾವು ಬೆಳೆದ ಭತ್ತ ಕಬ್ಬು,ಧವಸ-ಧಾನ್ಯ ಇವುಗಳನ್ನೆಲ್ಲ  ಇರಿಸಿ ಪೂಜೆ ಮಾಡುವುದು ಒಂದು ಕಾರಣ..

ಮತ್ತೊಂದು, ಸೂರ್ಯನು ಮಕರ ರಾಶಿಗೆ ಪ್ರವೇಶ ಮಾಡುವುದು ಇದೆ ದಿನ…. ಇದನ್ನು  **ಉತ್ತರಾಯಣ ಪುಣ್ಯಕಾಲ** ಎಂತಲೂ ಕರೆಯಲಾಗುತ್ತದೆ.

ಹಬ್ಬದ ಆಚರಣೆ ವಿಧಾನ::-

ಸಂಕ್ರಾಂತಿಯ ಹಿಂದಿನ ದಿನ ಭೋಗಿ ಹಬ್ಬ.. ಈ ದಿನದಂದು ಎಣ್ಣೆ ಅಭ್ಯಂಜನ ಮಾಡಿ, ಮನೆಯಲ್ಲಿ ರಂಗವಲ್ಲಿ ಹಾಕಿ, ಪೂಜೆ ಮಾಡಲಾಗುತ್ತದೆ..

ಮರುದಿನ ಸಂಕ್ರಾಂತಿ ಹಬ್ಬವನ್ನು ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ರೀತಿಯಲ್ಲಿ ಆಚರಿಸುತ್ತಾರೆ.. ನಮ್ಮ ಸಂಪ್ರದಾಯದಲ್ಲಿ ಈ ಹಬ್ಬದ ಪ್ರಮುಖ ವೈಶಿಷ್ಟ್ಯತೆ ಅಂದರೆ, ಸಕ್ಕರೆ ಅಚ್ಚು ಹಾಗೂ ಎಳ್ಳು ಬೆಲ್ಲ , ಇವನ್ನು ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಹಂಚುವುದು. ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡು ಎಂಬ ನಾಣ್ಣುಡಿ ಇದೆ….

IMG_20200115_211718

 

ಇಲ್ಲಿ, ಎಳ್ಳು ಬೆಲ್ಲ ಅಂದರೆ ಸರಿಯಾದ ಸಮಪ್ರಮಾಣದಲ್ಲಿ ಹುರಿದ ಎಳ್ಳು, ಹೆಚ್ಚಿದ ಬೆಲ್ಲ ಹಾಗೂ ಒಣಕೊಬ್ಬರಿ, ಹುರಿದ ಕಡಲೆಬೀಜ… ಇದರ ಜೊತೆಗೆ, ಕಬ್ಬು, ಬಾಳೆಹಣ್ಣು, ವೀಳ್ಯದೆಲೆ, ಅಡಿಕೆ,ರವಿಕೆ ವಸ್ತ್ರ, ದಕ್ಷಿಣೆ ಇವೆಲ್ಲವನ್ನು ಹಂಚುವುದು. ಇನ್ನೊಂದು ವಿಶೇಷ ಎಂದರೆ ಬಾಗಿನ- ಅಂದರೆ ಮದುವೆಯಾದ ಮೊದಲ ಐದು ವರುಷಗಳ ಕಾಲ ಮೇಲೆ ಹೇಳಿದ ಎಲ್ಲಾ ಸಾಮಾನುಗಳ ಜೊತೆಗೆ 5, 10, 15, 20, 25 ಈ ರೀತಿ ಬಾಳೆಹಣ್ಣುಗಳನ್ನು ಕೊಡಬೇಕು… ಇದರ ಜೊತೆ ಸಿಹಿ ಅಥವಾ ಬೂದುಕುಂಬಳಕಾಯಿ, ಕಡಲೆಕಾಯಿ ಇವನ್ನು ಕೊಡುವ ಪದ್ದತಿ ಸಹ ಇದೆ..

ಚಳಿಗಾಲದಲ್ಲಿ ಎಳ್ಳು ಬೆಲ್ಲ ತಿನ್ನುವುದು ಹಾಗೂ ಹಂಚುವುದು ತುಂಬಾ ಒಳ್ಳೆಯದು ಮತ್ತು ಎಳ್ಳು ವಿಷ್ಣುವಿನ ದೇಹದಿಂದ ಹುಟ್ಟಿದ್ದು ತುಂಬಾ ಶ್ರೇಷ್ಠ, ಎಂಬ ಪ್ರತೀತಿ ಇದೆ..

IMG_20200115_155954

ಸಕ್ಕರೆ ಅಚ್ಚನ್ನು ವಿವಿಧ ಆಕಾರದ ಮರದ ಅಚ್ಚುಗಳಿಗೆ ಹಾಕಿ ತಯಾರಿಸಲಾಗುತ್ತದೆ… ಇದನ್ನು ನಮ್ಮ ಅಜ್ಜಿ ತುಂಬಾ ಚೆನ್ನಾಗಿ ಮಾಡುತ್ತಾರೆ.. ಸಾಧ್ಯವಾದಾಗ ಪೋಸ್ಟ್ ಮಾಡುತ್ತೇನೆ ಓದುಗರೇ….(wooden moulds of different shapes )

ಕೆಲವು ಪ್ರಾಂತ್ಯಗಳಲ್ಲಿ, ಎಳ್ಳಿನಲ್ಲಿ ಉಂಡೆ ಮಾಡಿ ಹಂಚುವುದು ವಾಡಿಕೆ.. ಈ ಪುಣ್ಯಕಾಲದಲ್ಲಿ ಮಾಡುವ ದಾನ-ಧರ್ಮಗಳಿಗೆ ಸೂರ್ಯ ದೇವನು ವಿಶೇಷವಾಗಿ ಅನುಗ್ರಹಿಸುತ್ತಾನೆ ಎಂಬ ನಂಬಿಕೆ ಸಹ ಇದೆ…

ಸಾಮಾನ್ಯವಾಗಿ ಸಿಹಿ ಪೊಂಗಲ್, ಖಾರದ ಪೊಂಗಲ್, ಹಾಲಿನ ಪೊಂಗಲ್, ಇವು ಸಂಕ್ರಾಂತಿಯ ವಿಶೇಷ ಅಡುಗೆಗಳು…ಈ ಎಲ್ಲಾ ಅಡುಗೆಗಳನ್ನು ಮಾಡುವ ವಿಧಾನ ನನ್ನ ಬ್ಲಾಗ್ನಲ್ಲಿ ಬಹಳಾ ಹಿಂದೆಯೇ ಪೋಸ್ಟ್ ಮಾಡಿದ್ದೇನೆ.. ನೋಡಿ ಮಾಡಿ ಹೇಗಿತ್ತೆಂದು ಹೇಳಿ..💐

ಎಳ್ಳು-ಬೆಲ್ಲ ಸವಿಯುತ,
ದ್ವೇಷ-ಅಸೂಯೆಗಳ ಮರೆಯುತ,
ಹಬ್ಬದ ಸಂಭ್ರಮ ಸಾರುತ,
ಸಂತೋಷದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸೋಣ.

IMG_20180115_103133

IMG_20180114_181251

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.