Enu DhanyaLo Lakumi Lyrics(ಏನು ಧನ್ಯಳೋ ಲಕುಮಿ ಸಾಹಿತ್ಯ)

In this post I am sharing lyrics of a popular bhakti geethe by Shri Purandaradaasaru..This song is dedicated to Goddess Lakshmi..

1501756402694

ದಾಸಶ್ರೇಷ್ಠ ಪುರಂದರದಾಸರ ದೇವಿ ಮಹಾಲಕ್ಷ್ಮಿ ಮೇಲಿನ ಒಂದು ಜನಪ್ರಿಯ ಹಾಡಿನ ಸಾಹಿತ್ಯ ಕೆಳಗೆ ಕೊಟ್ಟಿರುತ್ತೇನೆ.. ನಿಮಗೆಲ್ಲ ಉಪಯೋಗವಾಗಬಹುದು..

ಏನು ಧನ್ಯಳೋ ಲಕುಮಿ ಎಂಥಾ ಮಾನ್ಯಳೋ
ಏನು ಧನ್ಯಳೋ ಲಕುಮಿ ಎಂಥಾ ಮಾನ್ಯಳೋ ||ಪಲ್ಲವಿ||
ಸಾನುರಾಗದಿಂದ ಹರಿಯ ತಾನೇ ಸೇವೆ ಮಾಡುತಿಹಳು

ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ
ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ
ಸಾಟಿಯಿಲ್ಲದೆ ಪೂರ್ಣಗುಣಳು , ಶ್ರೇಷ್ಠವಾಗಿ ಮಾಡುತಿಹಳು ||೧ ||

ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರರೂಪದಲ್ಲಿ ನಿಂತು
ಛತ್ರ ಚಾಮರ ವ್ಯಜನ ಪರ್ಯಂಕ ಪಾತ್ರರೂಪದಲ್ಲಿ ನಿಂತು
ಚಿತ್ರ ಚರಿತನಾದ ಹರಿಯ ನಿತ್ಯಸೇವೆ ಮಾಡುತಿಹಳು ||೨||

ಸರ್ವಸ್ಥಳದಿ ವ್ಯಾಪ್ತನಾದ ಸರ್ವದೋಷ ರಹಿತನಾದ
ಸರ್ವಸ್ಥಳದಿ ವ್ಯಾಪ್ತನಾದ ಸರ್ವದೋಷ ರಹಿತನಾದ
ಗರುಡಗಮನನಾದ ಪುರಂದರವಿಠ್ಠಲನ್ನ ಸೇವಿಸುವಳು ||೩||

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.