Few More Devotional Songs’ Lyrics On Goddess Saraswathi (ಇನ್ನೂ ಕೆಲವು ಭಕ್ತಿ ಗೀತೆಗಳ ಸಾಹಿತ್ಯ)

Dasara is fast approaching and below you can find lyrics of Devi bhakti geetha lyrics, specially related to Goddess Saraswathi, who is regarded as the  Goddess of Wisdom and Knowledge in Hinduism.. Hope you find the lyrics in kannada useful… If you need can provide the same in English as well..

1507121861845

ಇವಳೇ ವೀಣಾಪಾಣಿ ಸಾಹಿತ್ಯ :-

ಇವಳೇ ವೀಣಾಪಾಣಿ ವಾಣಿ
ತುಂಗಾ ತೀರಾ ವಿಹಾರಿಣೀ ಶೃಂಗೇರಿ ಪುರವಾಸಿನಿ
ಶಾರದಾ ಮಾತೆ ಮಂಗಳದಾತೆ
ಸುರ ಸಂಸೇವಿತೇ ಪರಮ ಪುನೀತೆ

ವಾರಿಜಾಸನ ಹೃದಯ ವಿರಾಜಿತೆ
ನಾರದ ಜನನೀ ಸುಜ ಸಂಪ್ರೀತೆ || ಇವಳೇ ವೀಣಾಪಾಣಿ ||

ಆದಿ ಶಂಕರ ಅರ್ಚಿತೆ ಮಧುರೆ
ನಾದಪ್ರಿಯೆ ನವಮಣಿ ಮಹ ಹಾರೆ |
ದೇವಾ ಅಖಿಲಶಾಸ್ತ್ರ ಆಗಮ ಸಾರೆ

ವಿದ್ಯಾದಾಯಿನಿ ಯೋಗ ವಿಚಾರೆ || ಇವಳೇ ವೀಣಾಪಾಣಿ ||


ಕೊಡು ಬೇಗ ದಿವ್ಯಮತಿ ಸಾಹಿತ್ಯ :-

ಕೊಡು ಬೇಗ ದಿವ್ಯಮತಿ ಸರಸ್ವತಿ
ಕೊಡು ಬೇಗ ದಿವ್ಯಮತಿ||

ಮೃಡ ಹರಿ ಹಯಮುಖರೊಡೆಯಳೆ
ನಿನ್ನಯ ಅಡಿಗಳಿಗೆರಗುವೆ ಅಮ್ಮ ಬ್ರಹ್ಮನ ರಾಣಿ ||

ಇಂದಿರಾರಮಣನ ಹಿರಿಯ ಸೊಸೆಯು ನೀನು
ಬಂದೆನ್ನ ಒಡನಾಡಿ ನಿಂದು ನಾಮವ ನುಡಿಸೇ || ೧||

ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದ ರಾಣಿ
ಸುಖವಿತ್ತು ಪಾಲಿಸೆ ಸುಜನಾ ಶಿರೋಮಣಿ ||೨||

ಪತಿತ ಅವನೇ ನೀ ಗತಿಯೆಂದು ನಂಬಿದೆ
ವಿತತಾ ಪುರಂದರವಿಠ್ಠಲನ ತೋರೆ ||೩||


 ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ  ಸಾಹಿತ್ಯ:-

ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ
ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ
ವಾಗಾಭಿಮಾನಿ ವರಬ್ರಹ್ಮಾಣೀ
ಸುಂದರವೇಣಿ ಸುಚರಿತ್ರಾಣಿ
ಸುಂದರವೇಣಿ ಸುಚರಿತ್ರಾಣಿ||

ಜಗದೊಳು ನಿಮ್ಮ ಪೊಗಳುವರಮ್ಮ
ಜಗದೊಳು ನಿಮ್ಮ ಪೊಗಳುವರಮ್ಮ|
ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ ||

ಪಾಡುವೆ ಶ್ರುತಿಯ ಬೇಡುವೆ ಮತಿಯ
ಪಾಡುವೆ ಶ್ರುತಿಯ ಬೇಡುವೆ ಮತಿಯ|
ಪುರಂದರ ವಿಠ್ಠಲನ ಸೋದರ ಸೊಸೆಯ
ಪುರಂದರ ವಿಠ್ಠಲನ ಸೋದರ ಸೊಸೆಯ ||

One thought on “Few More Devotional Songs’ Lyrics On Goddess Saraswathi (ಇನ್ನೂ ಕೆಲವು ಭಕ್ತಿ ಗೀತೆಗಳ ಸಾಹಿತ್ಯ)

  1. Pingback: Bhakti geethegaLu(ಭಕ್ತಿ ಗೀತೆಗಳು) having simple lyrics | Life is Marvellous

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.