Kalyanam Tulasi Kalyanam lyrics(ಕಲ್ಯಾಣಂ ತುಳಸಿ ಕಲ್ಯಾಣಂ ಸಾಹಿತ್ಯ)

This song is dedicated to Goddess Tulasi, composed by Shri Purandara daasaru.. Usually sung on Tulasi habba, this song describes the marriage event of Shri Tulasi with Lord Vishnu.. I got the lyrics of this devaranaama/devotional song from my friend Sowmya.. Thanking her for sharing this wonderful lyrics..

IMG_20191008_192736

ಕಲ್ಯಾಣಂ ತುಳಸಿ ಕಲ್ಯಾಣಂ |
ಕಲ್ಯಾಣಂ ತುಳಸಿ ಕಲ್ಯಾಣಂ |
ಕಲ್ಯಾಣವೇ ನಮ್ಮ ಕೃಷ್ಣ ಶ್ರೀತುಳಸಿಗೆ
ಬಲ್ಲಿದ ಶ್ರೀ ವಾಸುದೇವನಿಗೆ||

ಅಂಗಳದೊಳಗೆಲ್ಲ ತುಳಸಿಯ ವನಮಾಡಿ |
ಶೃಂಗಾರವ ಮಾಡಿ ಶೀಘ್ರದಿಂದ ||
ಕಂಗಳ ಪಾಪವ ಪರಿಹರಿಸುವ ಮುದ್ದು |
ರಂಗ ಬಂದಲ್ಲಿ ತಾ ನೆಲೆಸಿದನು ||೧||

ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟು|
ತಂದ ಶ್ರೀಗಂಧ ಅಕ್ಷತೆಗಳಿಂದ ||
ಸಿಂಧುಶಯನನ ವೃಂದಾವನದಿ ಪೂಜಿಸೆ|
ಕುಂದದ ಭಾಗ್ಯವ ಕೊಡುತಿಹಳು|| ೨||

ಭಕ್ಷ್ಯ ಭೋಜ್ಯಮ್ಗಳ ನೈವೇದ್ಯವನಿತ್ತು |
ಲಕ್ಷಬತ್ತಿಯ ದೀಪವ ಹಚ್ಚಿ ||
ಅಧೋಕ್ಷಜ ಸಹಿತ ವೃಂದಾವನ ಪೂಜಿಸೆ|
ಸಾಕ್ಷಾತ್ ಮೋಕ್ಷವ ಕೊಡುತಿಹಳು ||೩||

ಉತ್ಥಾನದ್ವಾದಶಿ ದಿವಸದಿಂದಲಿ ಕೃಷ್ಣ |
ಉತ್ತಮ ತುಳಸಿಗೆ ವಿವಾಹವ||
ಚಿತ್ತ ನಿರ್ಮಲರಾಗಿ ಮಾಡಿದವರಿಗೆ |
ಉತ್ತಮ ಗತಿ ಈವ ಪುರಂದರ ವಿಠಲ||೪ ||

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.