Sheshadri Vaasa Shri Lyrics (ಶೇಷಾದ್ರಿವಾಸ ಶ್ರೀ ತಿರುಮಲೇಶ ಸಾಹಿತ್ಯ)

This song is a devotional song on Lord Venkateshwara, from the movie ‘Jeevanadi’, sung by the singers- Shri Rajesh Krishnan and Smt Manjula Gururaj,composed by Shri R N Jayagopal..

gyuunt1545401411

Lyrics in Kannada:-

ಓ..
ಶೇಷಾದ್ರಿವಾಸ , ಶ್ರೀ ತಿರುಮಲೇಶ ,
ಶ್ರೀ ಶ್ರೀನಿವಾಸ , ಶ್ರೀ ವೆಂಕಟೇಶ ….
ನಮೋ ನಮೋ….
ಓ…
ಪದ್ಮಾವತೀಶ , ಭಕ್ತ ಹೃದಯೇಶ,
ಸಂಕಷ್ಟನಾಶ , ಗರುಡಾದ್ರಿವಾಸ
ನಮೋ ನಮೋ……

ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಭಕ್ತ ಜನ ಮಂದಾರ ಹೇ ಶ್ರೀನಿವಾಸ
ನೀ ಒಲಿದರೆ ಮನೆಯು ಲಕ್ಷ್ಮೀ ನಿವಾಸ…
ನೀ ನೀಗುವೆ ಜನರ ಸಂಕಷ್ಟವ….
ನೀ ತರುವೆ ಮನಕೆ ಸಂತೋಷವ …
ಕಾರುಣ್ಯ ನಿಧಿಯೇ ಶ್ರೀ ವೆಂಕಟೇಶ …
ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ||

ನಂಬಿದೆನು ನಾ ನಿನ್ನ ನೀನೆನ್ನ
ಶರಣೆಂದು ಉಸಿರುಸಿರು ತವನಾಮವು ,
ಕಾವಲಿಗೆ ಗೋವಿಂದ ಇರುವಾಗ
ನಮಗೆಲ್ಲ ಎಂದೆಂದೂ ಭಯ ದೂರವು ,
ಜೀವನದೆ ಆನಂದ ಅಳಿವುಳಿವು ನಿನ್ನಿಂದ
ಬಾಳಿಲ್ಲ ನೀನಿಲ್ಲದೆ ,
ಅರ್ಪಣೆಯ ಭಾವದಲಿ ನಿಂತಿರಲು
ಎದುರಿನಲ್ಲಿ ನೀನಿನ್ನ ಕೃಪೆ ತೋರಿದೆ…….
ಭಾಗ್ಯದ ಮಳೆಯನ್ನೂ ನೀ ಕರೆಯುವೆ ,
ನಿಜಮುಕ್ತಿ ಬಾಗಿಲನು ನೀ ತೆರೆಯುವೆ ,
ನಮಗೆ….ಒಲಿದೆ….ಪ್ರಭುವೇ…..ಅರಿಯೆ….
ಶೇಷಾದ್ರಿವಾಸ, ಶ್ರೀ ತಿರುಮಲೇಶ
ಶೇಷಾದ್ರಿವಾಸ, ಶ್ರೀ ತಿರುಮಲೇಶ||

ಪದ್ಮಾವತಿ ದೇವಿ ಕೈ ಹಿಡಿದ ಮಹರಾಯ
ಪಾಲಿಸೋ ಮಹನೀಯನೆ
ಅರಿಶಿನ ಕುಂಕುಮದ ಸೌಭಾಗ್ಯ
ನೀ ನೀಡು ಕಾಪಾಡು ಲಕ್ಷ್ಮೀಶನೇ ,
ನಮಗೆಲ್ಲ ಶತವರುಷ ಬಾಳಿರಲಿ
ನಿಜ ಹರುಷ ನೀಡಯ್ಯಾ ಪ್ರಭು ಇಂದಿಗೂ
ನಮ್ಮ ಮನೆ ಅಂಗಳದಿ ನಗೆಯೆನೆಂಬ
ಸೌರಭವು ಸೂಸಿರಲಿ ಎಂದೆಂದಿಗೂ ,
ಕವಿದಿದ್ದ ಇರುಳನ್ನು ನೀ ನೀಗಿದೆ ,
ಹೊಸದೊಂದು ನಂಬಿಕೆಯ ನೀ ನೀಡಿದೆ
ನಮಗೆ… ಒಲಿದೆ… ಪ್ರಭುವೇ.. ಅರಿಯೆ………||

ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಭಕ್ತ ಜನ ಮಂದಾರ ಹೇ ಶ್ರೀನಿವಾಸ
ನೀ ಒಲಿದರೆ ಮನೆಯು ಲಕ್ಷ್ಮೀ ನಿವಾಸ
ನೀ ನೀಗುವೆ ಜನರ ಸಂಕಷ್ಟವ
ನೀ ತರುವೆ ಮನಕೆ ಸಂತೋಷವ …
ಕಾರುಣ್ಯ ನಿಧಿಯೇ ಶ್ರೀ ವೆಂಕಟೇಶ …
ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ||

ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ
ಶೇಷಾದ್ರಿ ವಾಸ ಶ್ರೀ ತಿರುಮಲೇಶ||

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.