Bittergourd Gojju Recipe Type-1 (ಹಾಗಲಕಾಯಿ ಗೊಜ್ಜು ಮಾಡುವ ವಿಧಾನ -1)

ನಮಸ್ಕಾರ ಓದುಗರಿಗೆ…

ಇವತ್ತು ನಾವು ಹಾಗಲಕಾಯಿ ಗೊಜ್ಜು ನಮ್ಮ ಮನೆಯಲ್ಲಿ ಹೇಗೆ ಮಾಡುತ್ತೇವೆ ಎಂಬುದನ್ನು ನೋಡೋಣ… “ಅದರಕ್ಕೆ ಕಹಿಯಾದುದು ಉದರಕ್ಕೆ ಸಿಹಿ”  ಎಂಬಂತೆ  ಹಾಗಲಕಾಯಿ ದೇಹಕ್ಕೆ ತುಂಬಾ ಒಳ್ಳೆಯದು.. ಇದರಲ್ಲಿ ವಿಟಮಿನ್ ಸಿ, ಪ್ರೊಟೀನ್, ಕಬ್ಬಿಣದ ಅಂಶ ಬಹಳಷ್ಟಿದೆ..ಬೇರೆ ಬೇರೆ ವಿಧಾನಗಳಲ್ಲಿ ಮಾಡಬಹುದು.. ಇದು ನಮ್ಮ ಅಜ್ಜಿ ಮಾಡುವ ವಿಧಾನ…

Bittergourd gojju is a very healthy side dish that goes very well with chapathi, rice, sometimes with dosa as well..  There are many ways this gojju can be prepared.. Below one is my grandmom’s recipe..

IMG_20191017_170657

ಬೇಕಾದ ಸಾಮಗ್ರಿಗಳು ಹಾಗು ಮಾಡುವ ವಿಧಾನ :-

ಇದಕ್ಕೆ 3 ಮಧ್ಯಮ ಗಾತ್ರದ ಹಾಗಲಕಾಯಿ ತೊಳೆದು ಹೆಚ್ಚಿಕೊಳ್ಳಿ…

ಬಾಣಲೆಯಲ್ಲಿ ಆರು ಚಮಚ ಎಣ್ಣೆ ಹಾಕಿ, ಸಾಸುವೆ, ಜೀರಿಗೆ ಸಿಡಿಸಿ.. ಇದಕ್ಕೆ ಹೆಚ್ಚಿದ ಹಾಗಲಕಾಯಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ… ಚೆನ್ನಾಗಿ ಬಾಡಿಸಿದ ಮೇಲೆ, ಚಿಟಿಕೆ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಇಂಗು ಹಾಕಿ  ಹುರಿಯಿರಿ..

ಈಗ ನಾಲ್ಕು ಎಲೆ ಕರಿಬೇವು, ಮೂರು ಚಮಚ ಸಾರಿನ ಪುಡಿ ಹಾಕಿ, ಮಿಶ್ರಣ ಮಾಡಿ, ಸ್ವಲ್ಪ ಹುಣಸೆ ರಸ, ಸ್ವಲ್ಪ ಬೆಲ್ಲ, ಹಾಕಿ ಮತ್ತೊಮ್ಮೆ ಹುರಿದು, ಎರಡು ಚಮಚ ಪುಡಿ ಮಾಡಿದ ಬಿಳಿ ಎಳ್ಳು, ತುರಿದ ಒಣಕೊಬ್ಬರಿ ಎರಡು ಚಮಚ ಹಾಕಿ, ಒಂದು ಲೋಟ ನೀರು ಹಾಕಿ ಚೆನ್ನಾಗಿ ಕುದಿಸಿ.. ಈಗ ಅನ್ನ , ಚಪಾತಿ, ದೋಸೆ ಯಾವುದರ ಜೊತೆ ಬೇಕಾದರೂ ಸವಿಯಬಹುದಾದ ಆರೋಗ್ಯಕರ ಹಾಗಲಕಾಯಿ ಗೊಜ್ಜು ಸಿದ್ಧ.. 💐💐

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.