Below is the lyrics’ for evergreen old film songs on Goddess Mahalakshmi… One common thing in these three songs is that the lyricist is Shri Chi Udayashankar and singer is Smt S Janaki, these are very old, but evergreen devotional songs.
Mahalakshmi manege baaramma in kannada lyrics:-
ಆ ಆ ಆಆಆ ಆಆ ಆ ಆ ಆಆಆಆ ಆಆಆ ….
ಮಹಾಲಕ್ಷ್ಮಿ ಮನೆಗೆ ಬಾರಮ್ಮ
ಮಹಾಲಕ್ಷ್ಮಿ ಮನೆಗೆ ಬಾರಮ್ಮ
ನಮ್ಮ ಪ್ರೇಮದಿಂದೊಮ್ಮೆ ನೋಡಮ್ಮ..
ಶುಕ್ರವಾರವೂ ಪೂಜಾ ಸಮಯವೂ
ಶುಕ್ರವಾರವೂ ಪೂಜಾ ಸಮಯವೂ
ನೀ ಬರದೇ ಸುಖ ಶಾಂತಿ ಕಾಣೆವು..
ಮಹಾಲಕ್ಷ್ಮಿ ಮನೆಗೆ ಬಾರಮ್ಮ
ಮಹಾಲಕ್ಷ್ಮಿ ಮನೆಗೆ ಬಾರಮ್ಮ||
ನಿನ್ನ ಕಂಗಳಾ ಚಂದ್ರಿಕೆಯಲ್ಲಿ
ನಲಿಯುವ ಭಾಗ್ಯವ ನೀ ಕೊಡಲಾರೆಯ…..
ನಿನ್ನ ಕಾಲ್ಗಳ ಗೆಜ್ಜೆಯ ನಾದಕೆ
ಕುಣಿಯುವ ಯೋಗವ ನೀ ತರಲಾರೆಯ….
ಈ ಮನೆಯಲ್ಲಿ ಶಾಶ್ವತವಾಗಿ
ನೆಲೆಸಿ ನಮ್ಮನು ಹರಸಮ್ಮ||
ಮಹಾಲಕ್ಷ್ಮಿ ಮನೆಗೆ ಬಾರಮ್ಮ
ಮಹಾಲಕ್ಷ್ಮಿ ಮನೆಗೆ ಬಾರಮ್ಮ…………
ನಿನ್ನ ಸ್ಮರಣೆಯೇ ಮನಕಾನಂದವು
ನಿನ್ನ ಕರುಣೆಯೇ ಬಾಳಿನ ದೀಪವು…..
ನೀನಿರುವಾ ಮನೆ ಭೂವೈಕುಂಠವು
ನೀನೊಲಿದಾಗಲೇ ಸಿರಿ ಸೌಭಾಗ್ಯವು..
ನಂಬಿಹೆ ನಿನ್ನೆ ಕರವನು ಹಿಡಿದು..
ಅಮ್ಮ ನನ್ನ ನಡೆಸಮ್ಮಾ …
ಮಹಾಲಕ್ಷ್ಮಿ ಮನೆಗೆ ಬಾರಮ್ಮ
ಮಹಾಲಕ್ಷ್ಮಿ ಮನೆಗೆ ಬಾರಮ್ಮ
ನಮ್ಮ ಪ್ರೇಮದಿಂದೊಮ್ಮೆ ನೋಡಮ್ಮ..
ಶುಕ್ರವಾರವೂ ಪೂಜಾ ಸಮಯವೂ
ಶುಕ್ರವಾರವೂ ಪೂಜಾ ಸಮಯವೂ
ನೀ ಬರದೇ ಸುಖ ಶಾಂತಿ ಕಾಣೆವು..
ಮಹಾಲಕ್ಷ್ಮಿ ಮನೆಗೆ ಬಾರಮ್ಮ
ಮಹಾಲಕ್ಷ್ಮಿ ಮನೆಗೆ ಬಾರಮ್ಮ||
************************************************************************************
Baagila terediruve taaye in kannada lyrics:-
ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ
ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ
ಸೇವೆಯ ಸ್ವೀಕರಿಸು ಬಾ ಭಾಗ್ಯಲಕ್ಷ್ಮಿಯೇ
ಸೇವೆಯ ಸ್ವೀಕರಿಸು ಬಾ ಭಾಗ್ಯಲಕ್ಷ್ಮಿಯೇ
ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ
ಹೊಸಲಿನ ಪೂಜೆ ಮಾಡಿದೆಯಮ್ಮ…
ಹಸಿರು ತೋರಣ ಕಟ್ಟಿದೆಯಮ್ಮ||
ತುಪ್ಪದ ದೀಪ ಬೆಳಗಿದೆಯಮ್ಮ….
ಮಲ್ಲಿಗೆ ಮಾಲೆ ಕಾದಿದೆಯಮ್ಮ||
ಕಮಲಾಕ್ಷಿ ಕಮಲಮುಖಿ ಕಮಲೋದ್ಭವೇ ಬಾರೆ….
ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ…
ನೀನು ಬರುವಾಗ ಹೊನ್ನ ಕಾಲ್ಗೆಜ್ಜೆ ನಾದ ನಾ ಕೇಳುವಂತೆ…
ನಿನ್ನ ನಗೆಯಿಂದ ನನ್ನ ಭಯವೆಲ್ಲ ಓಡಿ ಮರೆಯಾಗುವಂತೆ…
ಮನೆಯು ಬೆಳಕಾಗಿ ಮನವು ಬೆಳಕಾಗಿ ಬಾಳು ಬೆಳಕಾಗುವಂತೆ…
ದಯಮಾಡಿಸು ನಾರಾಯಣನ ಹೃದಯೇಶ್ವರಿಯೇ …….
ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ…
ನಿನ್ನ ಮನೆಯೆಂದು ನಿನ್ನ ಗುಡಿಯೆಂದು ಬಂದು ಸ್ಥಿರವಾಗಿ ನೆಲೆಸು …
ಬಂದ ಕ್ಷಣದಿಂದ ತಂದ ಸುಖ ಶಾಂತಿ ನಮ್ಮ ಬದುಕಲ್ಲಿ ಬೆರೆಸು..
ನಿತ್ಯ ಹರಿಪೂಜೆ ನಿತ್ಯ ಗುರುಸೇವೆ ಇಲ್ಲಿ ನಡೆವಂತೆ ಹರಸು…
ದಯೆ ತೋರಿಸು ಶರಣೆನ್ನುವೆ ಸೌಭಾಗ್ಯದ ನಿಧಿಯೇ ….
ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ..
ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ..
ಸೇವೆಯ ಸ್ವೀಕರಿಸು ಬಾ ಭಾಗ್ಯಲಕ್ಷ್ಮಿಯೇ ..
ಸೇವೆಯ ಸ್ವೀಕರಿಸು ಬಾ ಭಾಗ್ಯಲಕ್ಷ್ಮಿಯೇ ..
ಬಾಗಿಲ ತೆರೆದಿರುವೆ ತಾಯೆ ಪೂಜೆಗೆ ಕಾದಿರುವೆ||
*************************************************************************************
kamalada mogadole in kannada lyrics:-
ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ….
ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ….
ಕಮಲನಾಭನ ಹೃದಯ ಕಮಲದಲಿ ನಿಂತೋಳೆ ಕಮಲೆ ನೀ ಕರಮುಗಿವೆ ಬಾಮ್ಮಾ ..
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ…..
ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ….
ಕಾವೇರಿ ನೀರ ಅಭಿಷೇಕಕಾಗಿ ನಿನಗಾಗಿ ನಾ ತಂದೆನಮ್ಮ….
ಕಂಪನ್ನು ಚೆಲ್ಲೋ ಸುಮರಾಶಿಯಿಂದ ಹೂಮಾಲೆ ಕಟ್ಟಿರುವೆನಮ್ಮ….
ಬಂಗಾರ ಕಾಲ್ಗೆಜ್ಜೆನಾದ ನಮ್ಮ ಮನೆಯಲ್ಲವ ತುಂಬುವಂತೆ………..ಎ……..
ಬಂಗಾರ ಕಾಲ್ಗೆಜ್ಜೆನಾದ ನಮ್ಮ ಮನೆಯಲ್ಲವ ತುಂಬುವಂತೆ………..
ನಲಿಯುತ….. ಕುಣಿಯುತ….. ಒಲಿದು ಬಾ……….. ನಮ್ಮ ಮನೆಗೆ ಬಾ..
ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ…..
ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ……
ಕಮಲನಾಭನ ಹೃದಯ ಕಮಲದಲಿ ನಿಂತೋಳೆ ಕಮಲಿ ನೀ ಕರಮುಗಿವೆ ಬಾಮ್ಮಾ..
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ…….
ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ….
ಶ್ರೀದೇವಿ ಬಾಮ್ಮಾ , ಧನಲಕ್ಷ್ಮಿ ಬಾಮ್ಮಾ ಮನೆಯನ್ನು ಬೆಳಕಾಗಿ ಮಾಡು..
ದಯೆತೋರಿ ಬಂದು ಮನದಲ್ಲಿ ನಿಂತು ಸಂತೋಷ ಸೌಭಗ್ಯ ನೀಡು….
ಸ್ಥಿರವಾಗಿ ಬಂದಿಲ್ಲಿ ನೆಲೆಸು…….. ತಾಯೇ ವರಮಹಾಲಕ್ಷ್ಮಿಯೇ ಹರಸು….
ಸ್ಥಿರವಾಗಿ ಬಂದಿಲ್ಲಿ ನೆಲೆಸು…….. ತಾಯೇ ವರಮಹಾಲಕ್ಷ್ಮಿಯೇ ಹರಸು….
ಕರವನು ಮುಗಿಯುವೆ…………. ಆರತಿ ಈಗ ಬೆಳಗುವೆ…..
ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..
ಕಮಲನಾಭನ ಹೃದಯ ಕಮಲದಲಿ ನಿಂತೋಳೆ ಕಮಲಿ ನೀ ಕರಮುಗಿವೆ ಬಾಮ್ಮಾ..
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ…
ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ….
ಕಮಲವ ಕೈಯಲ್ಲಿ ಹಿಡಿದೊಳೆ….
*************************************************************************************