Methi Rice/Pulav recipe (ಮೆಂತ್ಯ ಸೊಪ್ಪಿನ ಪಲಾವ್ ಮಾಡುವ ವಿಧಾನ)

ನಮಸ್ಕಾರ ಓದುಗರಿಗೆ.. ಇವತ್ತು ನಾವು ಮೆಂತ್ಯಸೊಪ್ಪಿನ ಪಲಾವ್ ಅಥವಾ ಚಿತ್ರಾನ್ನ ನಮ್ಮ ಮನೆಯಲ್ಲಿ ಹೇಗೆ ಮಾಡುತ್ತೇವೆ ಎಂಬುದನ್ನು ನೋಡೋಣ.. ಇದು ಬಹಳ ರುಚಿಕರ, ಆರೋಗ್ಯಕರ ಹಾಗೂ ಮಾಡುವುದು ಸುಲಭ ಕೂಡ..

ನಮ್ಮ ಮನೆಯಲ್ಲಿ ಈ ಪಲಾವ್ ಅಥವಾ ಭಾತ್ ಎರಡು ರೀತಿಯಲ್ಲಿ ಮಾಡುತ್ತೇವೆ… ಇಲ್ಲಿ ವಿವರಿಸುವುದು ಮೊದಲನೇ ವಿಧ…

ಬೇಕಾದ ಸಾಮಗ್ರಿಗಳು

ಮೆಂತ್ಯ ಸೊಪ್ಪು ಎರಡು ಚಿಕ್ಕ ಕಟ್ಟು
ಎರಡು ಚಿಕ್ಕ ಟೊಮೆಟೊ
ಎರಡು ಚಿಕ್ಕ ಈರುಳ್ಳಿ
ಒಂದು ಪಾವು ಅಕ್ಕಿ (ಸೋನಾ ಮಸೂರಿ/ ಬಾಸ್ಮತಿ)
ಚಿಕ್ಕ ಚೂರು ಚಕ್ಕೆ, ಶುಂಠಿ
ತಲಾ ಎರಡು ಏಲಕ್ಕಿ, ಲವಂಗ
ಅರ್ಧ ನಿಂಬೆ ರಸ
ಉಪ್ಪು
ಐದಾರು ಗೋಡಂಬಿ
ಐದಾರು ಹಸಿ ಮೆಣಸಿನಕಾಯಿ

IMG_20191102_172528

***ಮಾಡುವ ವಿಧಾನ ***

ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ನೆನಸಿಡಿ..
ಮೆಂತ್ಯ ಸೊಪ್ಪನ್ನು ಚೆನ್ನಾಗಿ ತೊಳೆದು, ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ…

ಈಗ ಚಿಕ್ಕ ಮಿಕ್ಸಿ ಜಾರ್ ಗೆ ಎರಡು ಏಲಕ್ಕಿ, ಒಂದು ಅರ್ಧ ಇಂಚು ಚಕ್ಕೆ, ಎರಡು ಲವಂಗ, ಸ್ವಲ್ಪ ಶುಂಠಿ, ಐದಾರು ಗೋಡಂಬಿ, ಐದಾರು ಹಸಿ ಮೆಣಸಿನಕಾಯಿ ಹಾಕಿ ಒಂದು ಬಾರಿ ಹಾಗೆ ರುಬ್ಬಿ, ನಂತರ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ…

ಈಗ ಕುಕ್ಕರ್ ಗೆ ಆರು ಚಮಚ ಎಣ್ಣೆ ಹಾಕಿ, ಬಿಸಿಯಾದ ಮೇಲೆ, ಜೀರಿಗೆ ಸಿಡಿಸಿ, ಎರಡು ಚಿಕ್ಕ ಈರುಳ್ಳಿ ಹೆಚ್ಚಿದ್ದು ಹಾಕಿ, ಹುರಿದು, ಟೊಮೆಟೊ ಹೆಚ್ಚಿದ್ದು ಹಾಕಿ,ಮೆಂತ್ಯ ಸೊಪ್ಪು ಹಾಕಿ ಹುರಿಯಿರಿ.. ನಂತರ ರುಬ್ಬಿದ ಮಿಶ್ರಣ, ಎರಡು ಕಪ್ ನೀರು, ನೆನಸಿದ ಅಕ್ಕಿ ಹಾಕಿ, ಸ್ವಲ್ಪ ಉಪ್ಪು, ಅರ್ಧ ಹೋಳು ನಿಂಬೆ ರಸ ಹಾಕಿ, ಕೆದಕಿ… ಈಗ ಕುಕ್ಕರ್ ಲಿ ಒಂದು ಅಥವಾ ಎರಡು ವಿಷಲ್ ಕೂಗಿಸಿದರೆ ಮೆಂತ್ಯ ಸೊಪ್ಪಿನ ಚಿತ್ರಾನ್ನ ತಯಾರಾಗುತ್ತದೆ…

ಇದನ್ನು ಹಾಗೆ ಬಡಿಸಬಹುದು ಅಥವಾ ಮೊಸರು ಬಜ್ಜಿ ಜೊತೆ ಕೂಡ ಚೆನ್ನಾಗಿರುತ್ತದೆ..

***************** ***********

Methi leaves palav or rice is very healthy tiffin box recipe and is also easy to make…

Needed ingredients and how to prepare?

First wash 250 grams of basmathi or Sona masuri rice and soak for 10 minutes…

Meanwhile wash, clean and chop 2 small bunches of methi leaves.. Also chop 2 small tomatoes and 2 small onions..

Now, to a small mixie jar put 2 cloves, 2 cardamoms, half inch cinnamon, small piece ginger, six cashews , five to six green chillies little water and make a fine paste..

Now to a cooker pan, pour six spoons oil, splutter jeera , chopped onions, fry well, add chopped tomatoes,fry, chopped methi leaves, fry well, salt, ground paste , fry well, add 2 cups of water , when it starts to boil add soaked rice..

Close the cooker lid and cook for one to two whistles.. Cool and serve directly or with raitha..

This also makes excellent buffet menu ,if sudden guests come home..

IMG_20191102_181832

Do give a try and let me know dear readers…. !!!

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.