Kadalekayi Parishe at Namma Bengalooru(ನಮ್ಮ ಬೆಂಗಳೂರಿನ ಕಡಲೇಕಾಯಿ ಪರಿಷೆ)

ಪ್ರೀತಿಯ ಓದುಗರಿಗೆ ನಮಸ್ಕಾರಗಳು….

ಇವತ್ತು ನಾನು ನಮ್ಮ ಬೆಂಗಳೂರಿನಲ್ಲಿ ಪ್ರತಿ ವರುಷ ನಡೆಯುವ ಕಡಲೇಕಾಯಿ ಪರಿಷೆ/ಜಾತ್ರೆ ಬಗ್ಗೆ ಮಾಹಿತಿ ತಂದಿದ್ದೀನಿ…ಕಾರಣಾಂತರಗಳಿಂದ ಕೆಲವು ದಿನಗಳಿಂದ ಯಾವುದೇ ಪೋಸ್ಟ್ ಹಾಕಿರಲಿಲ್ಲ… ಅದಕ್ಕಾಗಿ ಕ್ಷಮೆ ಇರಲಿ… ಸ್ವಲ್ಪ ಬ್ಯುಸಿ ಇದ್ದೆ..

ಈ ಜಾತ್ರೆ/ಪರಿಷೆ ಬಗ್ಗೆ ಮಾಹಿತಿ ಇಲ್ಲದವರು ಅಂದುಕೊಳ್ಳಬಹುದು:: “ಇದೇನಿದು ಬೆಂಗಳೂರಿನಲ್ಲಿ ಜಾತ್ರೆಯೇ?!!” ಎಂದು…ಹೌದು ಖಂಡಿತ ರೀ. ಇದು ಪ್ರತೀ ವರುಷ ಬಸವನಗುಡಿಯಲ್ಲಿ ನಡೆಯುವ ಜಾತ್ರೆ ಅಥವಾ ಪರಿಷೆ… ಮೂಲ ಬೆಂಗಳೂರಿಗರಿಗೆ ಇದು ಹೊಸದೇನಲ್ಲ.. ಪ್ರತೀ ವರುಷ ನಾವು ಇದರಲ್ಲಿ ಭಾಗವಹಿಸುತ್ತೀವಿ.. 🙂 🙂

IMG_20191125_100358

ಯಾವಾಗ/ಎಲ್ಲಿ ನಡೆಯುತ್ತದೆ ಹಾಗು ಇದರ ಐತಿಹ್ಯ ಏನು ?

ಇದು ನಮ್ಮ ಬೆಂಗಳೂರಿನ ಬಸವನಗುಡಿಯ ದೊಡ್ಡ ಗಣಪತಿ ಹಾಗು ಬಸವಣ್ಣ ದೇವಾಲಯದ ಹತ್ತಿರದಲ್ಲಿ ೩ ರಿಂದ ೪ ದಿನಗಳ ಕಾಲ ನಡೆಯುವ ಜಾತ್ರೆ ಎಂದು ಹೇಳಬಹುದು..

ಸಾಮಾನ್ಯವಾಗಿ ಇದು ನಡೆಯುವುದು ಕಡೆಯ ಕಾರ್ತೀಕ ಸೋಮವಾರದಂದು.. ಸುತ್ತಮುತ್ತ ಊರುಗಳ ರೈತರು ತಾವು ಬೆಳೆದ ಕಡಲೆಕಾಯಿಗಳನ್ನು ತಂದು ದೊಡ್ಡ ಗಣಪತಿ ದೇವಾಲಯ ಹಾಗು ದೊಡ್ಡ ಬಸವಣ್ಣನಿಗೆ ಸಮರ್ಪಣೆ ಮಾಡಿ, ನಂತರ ಪರಿಷೆ ನಡೆಸುತ್ತಾರೆ..

IMG_20191125_145955

ಏನೇನು ದೊರೆಯುತ್ತದೆ?

ರಸ್ತೆ ಬದಿ ತಿಂಡಿಗಳು, ತಳ್ಳೋ ಗಾಡಿ ಬಜ್ಜಿ ಬೋಂಡಾ ಹಾಗು ಚಾಟ್ ತಿಂಡಿಗಳು ,ಹುರಿದ, ಬೆಂದ, ಹಸಿ ಕಡಲೇಕಾಯಿಗಳು ರಾಶಿ ರಾಶಿ ಕಾಣಸಿಗುತ್ತವೆ. ಕೇವಲ ಕಡಲೆಕಾಯಿ ಮಾತ್ರವಲ್ಲ, ಮಕ್ಕಳಿಗೆ ತರತರದ ಆಟಿಕೆಗಳು, ಬತ್ತಾಸು, ಕಡಲೆಪುರಿ, ಅಲಂಕಾರಿಕ ವಸ್ತುಗಳು, ಮಣ್ಣಿನಿಂದ ಮಾಡಿದ ಮಡಿಕೆ, ಕುಡಿಕೆಗಳು, ಕರಕುಶಲ ವಸ್ತುಗಳು, ಮನೆಗೆ ಬೇಕಾದ ಸಲಕರಣೆಗಳು , ಮುಂತಾದ ವಸ್ತುಗಳು ಜಾತ್ರೆಯಲ್ಲಿ ಸಿಗುತ್ತದೆ..

IMG_20191125_100252

ಕಡಲೇಕಾಯಿ ಪರಿಷೆಯ ಇತಿಹಾಸ ಇಲ್ಲಿದೆ..

ಈಗಿರುವ ಬಸವನಗುಡಿ ಹಿಂದೆ ಹಲವಾರು ಹಳ್ಳಿಗಳ(ಗುಟ್ಟಹಳ್ಳಿ, ಮಾವಳ್ಳಿ, ಸುಂಕೇನಹಳ್ಳಿ ) ಸಮೂಹವಾಗಿತ್ತು .. ಈಗಲೂ ಸಹ ಕೆಲವೊಂದು ಜಾಗಗಳಿಗೆ ಅದೇ ಹೆಸರುಗಳು ಇವೆ. ಈ ಹಳ್ಳಿಗಳಲ್ಲಿ ಕಡಲೆಕಾಯಿಯನ್ನು ಮುಖ್ಯವಾಗಿ ಬೆಳೆಯುತ್ತಿದ್ದರು. ಅಲ್ಲೀ ಜನರು ಕಡಲೇಕಾಯಿ ಬೆಳೆದಾಗ, ಒಂದು ಎತ್ತು ಬಂದು ಫಸಲನ್ನು ತಿಂದು, ಮಿಕ್ಕಿದ್ದನ್ನು ತುಳಿದು ಹೋಗುತ್ತಿತ್ತಂತೆ .. ನೋಡಿ, ನೋಡಿ ಸಾಕಾದ ರೈತರು ಒಂದು ದಿನ ಆ ಎತ್ತನ್ನು ಅಟ್ಟಿಸಿಕೊಂಡು ಹೋದಾಗ, ಅದು ಓಡಿ ಹೋಗಿ ಈಗಿರುವ ದೇವಾಲಯದ ಜಾಗದಲ್ಲಿ ಕುಳಿತುಕೊಂಡು ಕಲ್ಲಾಯಿತಂತೆ. ಅದನ್ನು ಕೆಂಪೇಗೌಡರು ದೇವಸ್ಥಾನವಾಗಿ ಕಟ್ಟಿಸಿದರು ಎಂಬ ಐತಿಹ್ಯ ಸಹ ಇದೆ..

ಇದನ್ನು ನೋಡಿದ ರೈತರು ದಂಗಾಗಿ, ಈಶ್ವರನ ವಾಹನ ನಂದಿ(ದೊಡ್ಡ ಬಸವ )ಯೇ ಇಲ್ಲಿ ಬಂದು ತಮ್ಮ ಕಡಲೇಕಾಯಿ ತಿನ್ನುತ್ತಿದ್ದ ಎಂದುಕೊಂಡು(ಅದು ಇಲ್ಲಿನ ನಂಬಿಕೆ) ಅಂದಿನಿಂದ ಇಲ್ಲಿಯವರೆಗೂ ಕಡೆ ಕಾರ್ತಿಕ ಸೋಮವಾರದಂದು ಮೊದಲು ತಾವು ಬೆಳೆದ ಕಡಲೆಕಾಯಿಯನ್ನು ನಂದಿಗೆ ಅರ್ಪಿಸಿ ನಂತರ ಮಾರುತ್ತಾರೆ…

ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸುತ್ತಾರೆ- ದೇವಸ್ಥಾನಕ್ಕೆ ಹಾಗು ಜಾತ್ರೆಗೆ..ದೇವಸ್ಥಾನದ ಅಲಂಕಾರ ನೋಡಲು ಎರಡು ಕಣ್ಣು ಸಾಲದು ಎನ್ನಬಹುದು… ಮೊದಲ ಸರ್ತಿ ಭಾಗವಹಿಸಲು ಇಚ್ಛಿಸುವಿರಾದರೆ ನೀವು ನಿಮ್ಮ ವಸ್ತುಗಳ ಬಗ್ಗೆ ಎಚ್ಚರದಿಂದಿದ್ದರೆ ಒಳಿತು.. ಸಾಕಷ್ಟು ಪ್ರಮಾಣದಲ್ಲಿ ಪೊಲೀಸ್ ಕಣ್ಗಾವಲಿರುತ್ತದೆ.. ಆದರೂ ನೂಕು ನುಗ್ಗಲು ಇರುವುದರಿಂದ ನಮ್ಮ ಎಚ್ಚರದಲ್ಲಿ ನಾವಿದ್ದು, ಖುಷಿಯಾಗಿ ಜಾತ್ರೆಯ ಮಜಾ ಅನುಭವಿಸಬೇಕು ಅಲ್ಲವೇ ??!!💐💐💐💐💐💐 🙂

ನಿಮಗೆ ಈ ಮಾಹಿತಿ ಇಷ್ಟವಾಗಿದ್ದಲ್ಲಿ ಅಥವಾ ಈ ಉತ್ಸವದ ಬಗ್ಗೆ ಹಂಚಿಕೊಳ್ಳಲು ಬಯಸಿದರೆ, ಕೆಳಗೆ ಕಮೆಂಟ್ ಮಾಡಿರಿ…

IMG_20191125_145853

********************** ************************************* ***************

Translation of the post in English:-

Hello my dear readers,

Today I will be sharing details about **Groundnut fair(annual)** in Namma Bengaluru…

This fair happens for 3 to 4 days near Dodda Ganesha and Dodda Basavanna temples of Basavanagudi(Big Ganesha and Big Bull temples at Basavanagudi)…

People throng from all over to participate in this fair.. Usually it is on 4th Monday or last monday of Karthika month(November)… This year it is from 25th Nov 2019 till 27th Nov 2019, though people have started participating since 2 days before itself.. !!

Legend associated with the fair:-

Long time back , Basavanagudi area was surrounded by various villages like Mavalli, Sunkenahalli, Guttahalli etc(even now same names are valid ) farmers in those villages grew groundnuts as main crop … A big bull used to come , eat up and lastly spoiled the harvest and was absconding from sight… Farmers were fed-up with this menace of bull and one day they ran behind it to beat it with sticks. After chasing for a while, The bull became a stone( idol now in temple currently) and now believing it to be the vehicle of Lord Shiva( Nandi vaahana) , farmers even till date first offer freshly grown groundnuts to Lord Ganesha, Big Bull temple and later they start selling the groundnuts.. Devotees throng to the fair as well as to the temples Dodda Ganesha and Dodda Basavanna and offer special poojas to the deities..

IMG_20191125_100324

Apart from groundnuts(fried, boiled and also masala peanuts), we can also find kitchen utensils, handicrafts, pottery crafts, toys, jewelry, fancy items for ladies, fried snacks like bajji bondas, many types of street foods(chats, mixture varieties, Kalyana seve-battaasu-sugar coated candies, kadalepuri) and many items kept for sale from shopkeepers all over..

Location address:-

Bull Temple road(near Bugle rock park),
Basavanagudi,
Bangalore-560004

If you liked this post or want to share some more useful information related to the fair, please comment, your comments are always welcome!!!! 💐💐💐💐

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.