2-in-1 Ragi Uttappa/Paddu recipe( ಒಂದೇ ಹಿಟ್ಟಿನಲ್ಲಿ ರಾಗಿ ಉತ್ತಪ್ಪ/ಪಡ್ಡು ಮಾಡುವ ವಿಧಾನ)

ನಮಸ್ಕಾರ ಓದುಗರೇ…

ಇವತ್ತು ಒಂದೇ ದೋಸೆ ಹಿಟ್ಟಿನಲ್ಲಿ ರಾಗಿ ಉತ್ತಪ್ಪ/ ರಾಗಿ ಈರುಳ್ಳಿ ದೋಸೆ ಹಾಗೂ ರಾಗಿ ಪಡ್ಡು ಮಾಡುವುದು ಹೇಗೆ ಎಂಬುದನ್ನು ನೋಡೋಣ…

ರಾಗಿ ಆರೋಗ್ಯಕ್ಕೆ ಒಳ್ಳೆಯದು ಆಗಿರುವುದರಿಂದ ಬೆಳಗಿನ ಉಪಹಾರ ಹಾಗೂ ಮಕ್ಕಳ ಸಂಜೆ ತಿಂಡಿಗೂ ಮಾಡಿಕೊಡಬಹುದು…

RagiPaddu

Today let’s see how we make Ragi Uttappa/Ragi Paddu with the same dosa batter.. We can make paddus for morning breakfast or for kids’ evening snacks..

ಬೇಕಾದ ಪದಾರ್ಥಗಳು ಹಾಗೂ ಮಾಡುವ ವಿಧಾನ

ರಾಗಿ ಹಿಟ್ಟು Ragi/Finger millet flour – 2 ಕಪ್/ 2 cups
ಉದ್ದಿನಬೇಳೆ Urad dal – ಅರ್ಧ ಕಪ್ / half a cup
ಅಕ್ಕಿ ಹಿಟ್ಟು Rice Flour – ಎರಡು ಚಮಚ/ 2 spoons
ಚಿರೋಟಿ ರವೆ Fine Semolina – ಎರಡು ಚಮಚ/ 2 spoons
ಜೊತೆಗೆ ಈರುಳ್ಳಿ, ಕೊತ್ತಂಬರಿ ಸೊಪ್ಪು, ರುಚಿಗೆ ಉಪ್ಪು, ಅಡುಗೆ ಸೋಡಾ / Chopped onions, Coriander leaves, salt and soda(optional)

ಮೊದಲಿಗೆ ಉದ್ದಿನಬೇಳೆಯನ್ನು ಐದಾರು ಗಂಟೆಗಳ ಕಾಲ ನೆನೆಸಿಡಬೇಕು..
ನಂತರ ನುಣ್ಣಗೆ ರುಬ್ಬಿ ಅದಕ್ಕೆ ರಾಗಿ ಹಿಟ್ಟು, ಅಕ್ಕಿ ಹಿಟ್ಟು, ಚಿರೋಟಿ ರವೇ ಸೇರಿಸಿ.. ಒಂದೆರಡು ಗಂಟೆಗಳ ಕಾಲ ಬಿಡಬೇಕು… ನಂತರ ಅದೇ ಹಿಟ್ಟಿಗೆ, ಉಪ್ಪು, ಸ್ವಲ್ಪ ಸೋಡಾ ಸೇರಿಸಿ, 2 ಅಥವಾ 3 ಸಣ್ಣಗೆ ಹೆಚ್ಚಿದ ಈರುಳ್ಳಿ , ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ಒಂದೆರಡು, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ , ಮಿಕ್ಸ್ ಮಾಡಿ…
ಬೇಕಿದ್ದಲ್ಲಿ, ಇದೆ ಹಿಟ್ಟಿಗೆ, ಹೆಚ್ಚಿದ ಟೊಮೇಟೊ ಹಾಗು ತುರಿದ ಕ್ಯಾರಟ್ ಹಾಕಿಕೊಳ್ಳಬಹುದು.. ನಾನು ಹಾಕಿಲ್ಲ…

RagiUttappa

ಈಗ ಕಾವಲಿಯ ಮೇಲೆ ದೋಸೆ ರೀತಿಯಲ್ಲಿ ಹಾಕಿ, ಎರಡೂ ಬದಿಯಲ್ಲಿ ಬೇಯಿಸಿದರೆ, ರುಚಿಯಾದ ರಾಗಿ ಉತ್ತಪ್ಪ ಅಥವಾ ರಾಗಿ ಈರುಳ್ಳಿ ದೋಸೆ ಸವಿಯಲು ಸಿದ್ಧ…

ಇದನ್ನು ಪುದಿನ ಚಟ್ನಿ ಅಥವಾ ಆಲೂ ಪಲ್ಯ ಅಥವಾ ಚಟ್ನಿ ಪುಡಿ ಜೊತೆಗೆ ಬಡಿಸಬಹುದು …

ಪಡ್ಡು ಮಾಡುವುದಕ್ಕೆ:

ಮೊದಲಿಗೆ ಸ್ವಲ್ಪ ಎಣ್ಣೆ ಸವರಿದ ಪಡ್ಡು ತವಾ ಬಿಸಿ ಮಾಡಿ, ನಂತರ ದೋಸೆ ಹಿಟ್ಟನ್ನು ಸಣ್ಣ ಚಮಚದ ಸಹಾಯದಿಂದ ಒಂದೊಂದೇ, ತವಾದ ಗುಳಿಗಳಿಗೆ ಹಾಕಿ, ಮೇಲೆ ಸ್ವಲ್ಪ ಎಣ್ಣೆ ಚುಮುಕಿಸಿ, ೫ ನಿಮಿಷ ತಟ್ಟೆ ಮುಚ್ಚಿಡಿ… ಚೆನ್ನಾಗಿ ಬೆಂದ ನಂತರ ಪಡ್ಡು ತಯಾರಾಗುತ್ತದೆ..

Method in English

First soak Urad dal for 5 hours and later grind to a fine paste..
Now mix ragi flour, rice flour and fine semolina , salt, soda, mix well and keep aside for 2 hours… Now add finely chopped onions, coriander leaves, 1 to 2 chopped green chillies, if you like, you can also add grated carrots and tomatoes…

Now heat the tawa, and make dosas( dosas will be thicker than usual), roast on both the sides and serve with chutney/palya..

For Making Paddus, heat the paddu tawa, by smearing a little oil and pour batter with a small spoon.. Close the lid and cook for 5 to 8 minutes ..

Healthy paddu is ready to be served with chutney / palya/ ketchup..

PudinaChutney

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.