Raitha recipe(ಮೊಸರು ಬಜ್ಜಿ ಮಾಡುವ ವಿಧಾನ)

ನಮಸ್ಕಾರ ಓದುಗರಿಗೆ…

ಇತ್ತೀಚೆಗೆ ನಾನು ಹಾಡುಗಳ ಸಾಹಿತ್ಯ ಅಥವಾ ಬೇರೆ ಯಾವುದೇ ಪೋಸ್ಟ್ ಮಾಡುವುದು ಕಡಿಮೆಯಾಗಿದೆ.. ಕೆಲಸದಲ್ಲಿ ಬ್ಯುಸಿ ಇದ್ದೇನೆ.. ಹಾಗಾಗಿ ಪೋಸ್ಟ್ ಮಾಡಲಾಗುತ್ತಿಲ್ಲ… ಅದಕ್ಕಾಗಿ ಕ್ಷಮೆ ಇರಲಿ..

ಇವತ್ತು ನಾನು ಮೊಸರು ಬಜ್ಜಿ ನಮ್ಮ ಮನೆಯಲ್ಲಿ ಹೇಗೆ ಮಾಡುತ್ತೇವೆ ಎಂಬುದನ್ನು ವಿವರಿಸಿದ್ದೀನಿ… ಈ ಮೊಸರು ಬಜ್ಜಿ ಅಥವಾ ರಾಯಿತ , ಚಪಾತಿ/ರೋಟಿ ಅಥವಾ ವಿಧ ವಿಧ ಅನ್ನ/ಭಾತ್ ಗಳ ಜೊತೆಗೆ ಬಡಿಸುತ್ತೇವೆ.. ಕೆಳಗಿನ ಚಿತ್ರಪಟದಲ್ಲಿರುವುದು ಆಲೂಗಡ್ಡೆ ಮೊಸರು ಬಜ್ಜಿ ಅಥವಾ ಆಲೂಗಡ್ಡೆ ರಾಯಿತ..

ಮಾಡುವ ವಿಧಾನ..

೩ ರಿಂದ ೪ ಆಲೂಗಡ್ಡೆ ತೊಳೆದುಕೊಂಡು, ಸಿಪ್ಪೆ ತೆಗೆದು , ಚೆನ್ನಾಗಿ ಬೇಯಿಸಿ, ಮಸೆದಿಟ್ಟುಕೊಳ್ಳಿ…
ಕೊತ್ತಂಬರಿ ಸೊಪ್ಪು, ೨ ಹೆಚ್ಚಿದ ಹಸಿಮೆಣಸಿನಕಾಯಿ

ಈಗ ಒಂದು ಕಪ್ ನಷ್ಟು ಮೊಸರು(ಹುಳಿ ಮೊಸರು) ತೆಗೆದುಕೊಂಡು , ಅದಕ್ಕೆ ಉಪ್ಪು, ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪು, ಸ್ವಲ್ಪ ತೆಂಗಿನ ತುರಿ ಹಾಕಿ ಕಲಸಿ.. ಇದಕ್ಕೆ ಬೇಯಿಸಿದ ಆಲೂಗಡ್ಡೆ ಹಾಕಿ..

ಒಗ್ಗರಣೆ:::ನಂತರ ಸ್ವಲ್ಪ ಎಣ್ಣೆ ಬಿಸಿ ಮಾಡಿ , ಸಾಸುವೆ , ಜೀರಿಗೆ ಸಿಡಿಸಿ, ಹಸಿಮೆಣಸಿನಕಾಯಿ ಬಾಡಿಸಿ, ಇಂಗು, (ಬೇಕಿದ್ದಲ್ಲಿ ಸ್ವಲ್ಪ ಅರಿಶಿನ ) ಹಾಕಿ ಬಾಡಿಸಿ.. ಈ ಒಗ್ಗರಣೆಯನ್ನು ಮೇಲಿನ ಆಲೂಗಡ್ಡೆ ಮಿಶ್ರಣಕ್ಕೆ ಹಾಕಿ, ಕಲಸಿ.. ಯಾವುದೇ ಅನ್ನದ ಬಗೆಗಳಿಗೆ/ಪಲಾವ್/ರೋಟಿಗಳ ಜೊತೆಗೆ ಬಡಿಸಬಹುದು…

ಯಾವ ಯಾವ ತರಕಾರಿಗಳನ್ನು ಉಪಯೋಗಿಸಬಹುದು..

ಟೊಮೇಟೊ-ಈರುಳ್ಳಿ ಮಿಶ್ರಣ
ಸೌತೆಕಾಯಿ
ಮೂಲಂಗಿ
IMG_20191224_182306

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.