Different Types of Stir Fry recipes(ಬಗೆ ಬಗೆಯ ಪಲ್ಯಗಳನ್ನು ಮಾಡುವ ವಿಧಾನ)

ನಾವು ಚಪಾತಿ , ಅನ್ನ ತಿಳಿಸಾರು ಕೆಲವೊಮ್ಮೆ ದೋಸೆ ಜೊತೆಗೆ ಪಲ್ಯಗಳನ್ನು/ಉಸ್ಲಿ ಗಳನ್ನು ಮಾಡುತ್ತೇವೆ.. ತರಕಾರಿ ಒಂದು ಹೆಚ್ಚಿಟ್ಟಿದ್ದರೆ, ಈ ರೀತಿಯ ಪಲ್ಯಗಳನ್ನು ಮಾಡುವುದು ಒಂದು ಹತ್ತು ನಿಮಿಷದ ಕೆಲಸ, ಇವು ಆರೋಗ್ಯಕರ ಕೂಡ… ಈ ಪಲ್ಯಗಳನ್ನು ಹಬ್ಬಗಳ ದಿನ ಸಹ ಮಾಡಬಹುದು, ಹಬ್ಬದ ಅಡುಗೆ ಭಾಗವಾಗಿ….

IMG_20200105_151706

ಈಗ ನಾವು ಸಾಮಾನ್ಯವಾಗಿ ಮಾಡುವ ಬಗೆ ಬಗೆಯ ಪಲ್ಯಗಳನ್ನು ನೋಡೋಣ… ಈ ಯಾವ ಪಲ್ಯಕ್ಕೂ ಈರುಳ್ಳಿ ಅಥವಾ ಬೆಳ್ಳುಳ್ಳಿ ಹಾಕಿಲ್ಲ…

ಮೊದಲನೆಯದು , ಬೀಟ್ರೂಟ್ ಪಲ್ಯ… ಈ ಪಲ್ಯಕ್ಕೆ ನಾಲ್ಕರಿಂದ ಐದು ಬೀಟ್ರೂಟ್ ತೆಗೆದುಕೊಂಡು, ಸಿಪ್ಪೆ ತೆಗೆದು ಹೆಚ್ಚಿಡಿ… ನಂತರ ಇದನ್ನು ಸ್ವಲ್ಪ ನೀರು ಹಾಕಿಕೊಂಡು ಕುಕರ್ನಲ್ಲಿ ಬೇಯಿಸಿಕೊಳ್ಳಿ…

ಈಗ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ, ಸಾಸಿವೆ , ಜೀರಿಗೆ ಸಿಡಿಸಿ, ಒಂದರ್ಧ ಚಮಚ ಕಡಲೆಬೇಳೆ, ಉದ್ದಿನಬೇಳೆ ಸೇರಿಸಿ ಹುರಿದು, ನಂತರ ಒಂದೆರಡು ಹಸಿಮೆಣಸಿನಕಾಯಿ ಅಥವಾ ಒಂದು ಒಣ ಮೆಣಸಿನಕಾಯಿ ಹಾಕಿ, ಸ್ವಲ್ಪ ಇಂಗು,ಉಪ್ಪು, ಬೆಂದ ಬೀಟ್ರೂಟ್ ಹಾಕಿ ಹುರಿದು, ಕಡೆಯಲ್ಲಿ, ಕೊತ್ತಂಬರಿ ಸೊಪ್ಪು ಹಾಗೂ ಕಾಯಿ ತುರಿ ಇಂದ ಅಲಂಕರಿಸಿ, ಬಡಿಸಿ….

ಇದೆ ವಿಧಾನ ಅನುಸರಿಸಿ, ಬೇಯಿಸಿದ ಅವರೆಕಾಳು/ಹೆಸರುಕಾಳು( ಅವರೆಕಾಳು ಉಸುಲಿ ಹಾಗೂ ಹೆಸರುಕಾಳಿನ ಉಸಲಿ ಅಥವಾ ಪಲ್ಯ), ಎಲೆಕೋಸು , ನವಿಲುಕೋಸು, ಆಲೂಗಡ್ಡೆ, ಕ್ಯಾರಟ್ , ಹುರುಳಿಕಾಯಿ ಇವೆಲ್ಲದರ ಪಲ್ಯ ಮಾಡಿಕೊಳ್ಳಬಹುದು…

ಕೆಳಗಿನ ಚಿತ್ರಪಟ ಹೆಸರುಕಾಳಿನ ಪಲ್ಯ / ಉಸಲಿಯದ್ದು…. ನಾವು ಸಾಮಾನ್ಯವಾಗಿ ಈ ಉಸಲಿಯನ್ನು ಅಥವಾ ಕಡಲೆ ಗುಗರಿಯನ್ನು ( ಹಬ್ಬಗಳ ದಿನ) ಒಂದು ದೊನ್ನೆ ಯಲ್ಲಿ ಬಾಗಿನ/ತಂಬೂಲದೊಂದಿಗೆ ಮುಖ್ಯವಾಗಿ ವರಮಹಾಲಕ್ಷ್ಮಿ ವ್ರತ/ಸ್ವರ್ಣಗೌರಿ ಹಬ್ಬ ದಿನಗಳಂದು ಕೊಡುತ್ತೀವಿ… ಹಾಗೂ ಗಣಪತಿ ಹಬ್ಬದಂದು ಸಂಜೆಯ ನೈವೇದ್ಯಕ್ಕೆ ಮಾಡುತ್ತೇವೆ….

IMG_20200105_180746

ಹೆಚ್ಚಿನ ರುಚಿಗೆ ನಿಂಬೆ ರಸ ಸೇರಿಸಿಕೊಳ್ಳಬಹುದು…. ಸೊಪ್ಪಿನ ಪಲ್ಯಕ್ಕೆ ಬೇಯಿಸಿದ ತೊಗರಿಬೇಳೆ ಒಂದು ಸಣ್ಣ ಕಪ್ ನಷ್ಟು  ಸೇರಿಸಿ ಮಾಡುತ್ತೇವೆ….… 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.