Baby Potato Masala(ಬೇಬಿ ಆಲೂ ಮಸಾಲ ಮಾಡುವ ವಿಧಾನ) recipe

ಮನೆಯಲ್ಲಿ ಬೇರೆ ಯಾವ ತರಕಾರಿ ಫ್ರಿಡ್ಜ್ ನಲ್ಲಿ ಇಲ್ಲದಿರುವಾಗ, ನಮ್ಮ ಕಣ್ಣಿಗೆ ಕಾಣಿಸುವುದು ಆಲೂಗಡ್ಡೆ ಹಾಗೂ ಈರುಳ್ಳಿ… ಇದರಿಂದ ಪಲ್ಯ, ಸಾಂಬಾರು/ಹುಳಿ ಎಲ್ಲವನ್ನೂ ಮಾಡಬಹುದು…

ಬೇಬಿ ಆಲೂಗಡ್ಡೆ ಅಥವಾ ಸಣ್ಣ ಆಲೂಗಡ್ಡೆ ನೀವು ಕೊಂಡು ತಂದಿದ್ದರೆ ಈ ಮಸಾಲ ಮಾಡಿ ನೋಡಿ.. ಇದು ಉತ್ತರ ಭಾರತದ ಗ್ರೇವಿ ಅಥವಾ ಮಸಾಲೆ.. ಮಾಡುವುದು ಸುಲಭ ಹಾಗೂ ರುಚಿಕರ..ನಾನು ಒಂದು ಬಗೆಯನ್ನು ಮಾತ್ರ ಇಲ್ಲಿ ವಿವರಿಸಿದ್ದೇನೆ..

ಚಪಾತಿ, ಮೊಸರನ್ನ, ಅನ್ನ ಸಾರು ಇವುಗಳೊಂದಿಗೆ ಚೆನ್ನಾಗಿರುತ್ತದೆ…ರುಚಿಗೆ ಬಂದರೆ, ನಾವು ಮಾಮೂಲಿಯಾಗಿ ಮಾಡುವ ಗೊಜ್ಜು, ಪಲ್ಯ, ತೊವ್ವೆ, ಹುಳಿ ಇವೆಲ್ಲ ತಿಂದಷ್ಟು ನಮಗೆ ಖುಷಿ ಇಲ್ಲದಿದ್ದರೂ, ಮಕ್ಕಳಿಗೆ ಹಾಗೂ ಅಪರೂಪಕ್ಕೆ ಇಷ್ಟವಾಗುತ್ತದೆ ಎಂದು ಹೇಳಬಹುದು… 🙂🙂

IMG_20200110_192833

ಬೇಕಾದ ಸಾಮಗ್ರಿಗಳು ಹಾಗೂ ಮಾಡುವ ವಿಧಾನ

ಸಣ್ಣ ಆಲೂಗಡ್ಡೆ( baby potatoes) – 400 grams
ಈರುಳ್ಳಿ , ಟೊಮೆಟೊ( onions, tomatoes) – 2 each
ಗರಂ ಮಸಾಲೆ, ಅಚ್ಚ ಖಾರದ ಪುಡಿ, ಧನಿಯಾ ಪುಡಿ ತಲಾ ಒಂದೊಂದು ಚಮಚ(ರುಚಿಗೆ ತಕ್ಕಷ್ಟು)- one spoon each of garam masala,red chilli powder , Dhaniya powder
ಶುಂಠಿ ಒಂದು ಇಂಚು – one inch ginger
ಉಪ್ಪು, ಇಂಗು, ಅಡುಗೆ ಎಣ್ಣೆ – oil, salt, asafoetida

ಮೊದಲು ಆಲೂಗಡ್ಡೆಗಳನ್ನು ತೊಳೆದು, ಬೇಯಿಸಿ, ಸಿಪ್ಪೆ ತೆಗೆದು ಇಡೀ..
First, wash, boil and peel baby potatoes …

ಒಂದು ಬಾಣಲೆಯಲ್ಲಿ ಐದು ಚಮಚ ಅಡುಗೆ ಎಣ್ಣೆ, ಸಾಸಿವೆ, ಜೀರಿಗೆ ಸಿಡಿಸಿ, ಹೆಚ್ಚಿದ ಈರುಳ್ಳಿ, ಶುಂಠಿ ಹಾಕಿ ಚೆನ್ನಾಗಿ ಬಾಡಿಸಿ…  ನಂತರ ಹೆಚ್ಚಿದ ಟೊಮೆಟೋ ಹಾಕಿ, ಹುರಿದು, ಸ್ವಲ್ಪ ಇಂಗು ಹಾಗೂ ಉಪ್ಪು ಸೇರಿಸಿ, ಹುರಿದು, ಆಲೂಗಡ್ಡೆ ಸೇರಿಸಿ, ಒಂದು ಚಮಚ ಅಚ್ಚ ಖಾರದ ಪುಡಿ, ಒಂದು ಚಮಚ ಗರಂ ಮಸಾಲೆ, ಒಂದು ಚಮಚ ಧನಿಯಾ ಪುಡಿ ಹಾಕಿ, ಚೆನ್ನಾಗಿ ಕೆದಕಿ, ಒಂದು ಚಿಕ್ಕ ಲೋಟ ನೀರು ಹಾಕಿ ಒಂದು 15 ನಿಮಿಷ ಚೆನ್ನಾಗಿ ಬೇಯಲು ಬಿಡಿ… ಕಡೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ…

In a pan, pour oil, once it is hot, put one spoon each of mustard and jeera, once it’s splitters, add onions, ginger, fry well and add tomatoes, fry well and add Hing,potatoes , salt, all masala powders,fry well and add one cup of water, close lid and let it cool for 15 minutes, till potatoes gets mixed up well with all spices… Lastly put coriander leaves and serve with Chapathi, rice rasam, or curd rice…

 

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.