Poha Sweet Pongal(ಅವಲಕ್ಕಿ ಸಿಹಿ ಪೊಂಗಲ್ ಮಾಡುವ ವಿಧಾನ) recipe

ನನ್ನ ಪ್ರೀತಿಯ ಓದುಗರಿಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು…..ಈ ಸಂಕ್ರಮಣವು ನಿಮ್ಮೆಲ್ಲರಿಗೂ ಸುಖ, ಶಾಂತಿ, ನೆಮ್ಮದಿ, ಆನಂದ, ಸಂತೋಷ ಸರ್ವ ಸಂಪತ್ತನ್ನೂ ಕರುಣಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ..

ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬಕ್ಕೆ ಸಿಹಿ ಪೊಂಗಲ್ ಹಾಗೂ ಖಾರದ ಪೊಂಗಲ್ ಮಾಡುತ್ತೇವೆ… ಈ ವರುಷ ಸ್ವಲ್ಪ ಬದಲಾವಣೆ ಇರಲೆಂದು ನಾನು ಅವಲಕ್ಕಿ ಇಂದ ಸಿಹಿ ಪೊಂಗಲ್ ಮಾಡಿದ್ದೀನಿ… ತುಂಬಾ ಚೆನ್ನಾಗಿರುತ್ತದೆ…. ಮಾಡಿ ನೋಡಿ ಹೆಗಿತ್ತೆಂದು ತಿಳಿಸಿರಿ…. 💐💐

IMG_20200115_153503

ಬೇಕಾದ ಸಾಮಗ್ರಿಗಳು ಹಾಗೂ ಮಾಡುವ ವಿಧಾನ

ಒಂದು ಕಪ್ ಅವಲಕ್ಕಿ
ಮುಕ್ಕಾಲರಿಂದ ಒಂದು ಕಪ್ ಬೆಲ್ಲ
ಮುಕ್ಕಾಲು ಕಪ್ ಹೆಸರುಬೇಳೆ
ಅರ್ಧ ಕಪ್ ಹಾಲು
ಎರಡು ಚಮಚ ತುಪ್ಪ
ಅರ್ಧ ಕಪ್ ತೆಂಗಿನ/ಒಣಕೊಬ್ಬರಿ ತುರಿ(optional)
ಒಣದ್ರಾಕ್ಷಿ, ಗೋಡಂಬಿ
ಏಲಕ್ಕಿ ಪುಡಿ

ಮೊದಲು ಅವಲಕ್ಕಿಯನ್ನು ತೊಳೆದು ನೆನಸಿಡಿ…

ಹೆಸರುಬೇಳೆಯನ್ನು ಬೆಚ್ಚಗೆ ಮಾಡಿಕೊಂಡು ಬೇಯಿಸಿಡಿ…

ಈಗ ಒಂದು ಬಾಣಲೆಗೆ, ಎರಡು ಚಮಚ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿ ಹುರಿದುಕೊಂಡು, ತೆಗೆದಿಡಿ…

ನಂತರ ಬೆಲ್ಲ+ಕಾಲು ಕಪ್ ನೀರು ಹಾಕಿ , ಬೆಲ್ಲವನ್ನು ಕರಗಿಸಿಕೊಳ್ಳಿ…. ನಂತರ ಬೇಯಿಸಿದ ಬೇಳೆ, ಅವಲಕ್ಕಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು, ದ್ರಾಕ್ಷಿ, ಗೋಡಂಬಿ ಹಾಕಿ, ಚೆನ್ನಾಗಿ ಮಿಕ್ಸ್ ಆದಮೇಲೆ, ಅರ್ಧ ಕಪ್ ತಣ್ಣಗಿನ ಹಾಲು ಹಾಕಿ ಒಂದು ಕುದಿ ಕುದಿಸಿ.. ಅರ್ಧ ಕಪ್ ಕೊಬ್ಬರಿ ತುರಿ ಹಾಕಿಕೊಳ್ಳಬಹುದು… ಆರಿದ ನಂತರ ಗಟ್ಟಿಯಾಗುತ್ತದೆ… ಬೇಕಿದ್ದಲ್ಲಿ ಸ್ವಲ್ಪ ಹಾಲು/ ನೀರು ಹಾಕಿಕೊಂಡು ಬೇಯಿಸಿ ನಂತರ ಬಡಿಸಿ…

ಈಗ ರುಚಿಯಾದ ಅವಲಕ್ಕಿ ಪೊಂಗಲ್ ಬಡಿಸಲು ಸಿದ್ಧ… ಇದನ್ನು ಹಬ್ಬಗಳಿಗೆ ನೈವೇದ್ಯಕ್ಕೆ ಮಾಡಿಕೊಳ್ಳಬಹುದು….

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.