4 Recipes using Palak/Spinach( ಪಾಲಾಕ್ ಸೊಪ್ಪಿನ 4 ಬಗೆ ಅಡುಗೆಗಳು)

Palak soppu or Spinach leaves is packed with rich essential nutrients, rich in Vitamin A, iron, fibre content and has innumerable health benefits. We can make varieties of dishes using Palak and I have provided below the list of recipes using Palak leaves that we make at our home..

ಪಾಲಾಕ್ ಸೊಪ್ಪು ಅತ್ಯಂತ ಪೌಷ್ಟಿಕಾಂಶ ಉಳ್ಳದ್ದು, ಅದರಲ್ಲಿ, ನಾರಿನಂಶ, ವಿಟಮಿನ್ ಏ ಮತ್ತು ವಿಟಮಿನ್ ಸಿ ಅಂಶ ಹೇರಳವಾಗಿದೆ… ವಿಧ ವಿಧ ಅಡುಗೆಗಳನ್ನು ಈ ಸೊಪ್ಪಿನಿಂದ ಮಾಡಬಹುದು… ಉದಾಹರಣೆ, ತೊವ್ವೆ, ಸಾಂಬಾರ್, ಪರೋಟ, ಪೂರಿ, ಸಾಗು ಈ ರೀತಿ…ನಮ್ಮ ಮನೆಯಲ್ಲಿ ಈ ಸೊಪ್ಪಿನಿಂದ ಮಾಡುವ ಕೆಲವೊಂದು ಅಡುಗೆಗಳನ್ನು ವಿವರಿಸಿದ್ದೇನೆ…

[1] Palak Curry/Saagu recipe (ಪಾಲಾಕ್ ಸಾಗು ಮಾಡುವ ವಿಧಾನ)

      • ಮೊದಲಿಗೆ ಎರಡು ಚಿಕ್ಕ ಕಟ್ಟು ಅಥವಾ ಒಂದು ದೊಡ್ಡ ಕಟ್ಟು ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು, ಎಲೆಗಳನ್ನು ಬಿಡಿಸಿ ಕೊಳ್ಳಿ… ಸೊಪ್ಪನ್ನು  ಸ್ವಲ್ಪ ಬಿಸಿನೀರಿನಲ್ಲಿ ಉಪ್ಪು ಹಾಕಿ ಒಂದೆರಡು ನಿಮಿಷ ಕುದಿಸಿ, ತಣ್ಣಗಾದ ನಂತರ ಪೇಸ್ಟ್ ಮಾಡಿಕೊಳ್ಳಬೇಕು..
        First wash and boil palak+ salt in a cup of water for 2 mins… cool and grind to paste..
      • ನಿಮಗೆ ಬೇಕಾದ ತರಕಾರಿಗಳನ್ನು( ನಾನಿಲ್ಲಿ ಹುರುಳಿಕಾಯಿ, ಕ್ಯಾರಟ್, ಎಲೆ ಕೋಸು ಉಪಯೋಗಿಸಿದ್ದೇನೆ)
        ಹೆಚ್ಚಿಟ್ಟುಕೊಳ್ಳಿ… ನಂತರ ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಿ..
        Steam cut veggies like beans, carrot, cabbage.. You can add any vegetable, as per your preferences..
      • ಈಗ ಒಂದು ಸಣ್ಣ ಮಿಕ್ಸಿ ಜಾರಿಗೆ ಮೂರು ಹಸಿಮೆಣಸಿನಕಾಯಿ(ಖಾರ ಜಾಸ್ತಿ ಬೇಕಿದ್ದಲ್ಲಿ ೫), ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಶುಂಠಿ, ಅರ್ಧ ಚಮಚ ಜೀರಿಗೆ,ಕಾಲು ಕಪ್ ಕಾಯಿ ತುರಿ, ತಲಾ ಒಂದು ಲವಂಗ, ಏಲಕ್ಕಿ, ಅರ್ಧ ಚಮಚ ಸೋಂಪು ಕಾಳು, ಅರ್ಧ ಇಂಚು ಚಕ್ಕೆ ಎಲ್ಲವನ್ನು ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ..
        To a mixie jar add, 3 to 4 green chillies, coriander leaves, little ginger, half a spoon cumin seeds, 1/4 cup cocounut gratings, 1 each clove-cardamom, half an inch cinnamon, half a spoon saunf–> make a fine paste..
      • ಈಗ ಒಂದು ಪಾತ್ರೆಗೆ ಮಿಕ್ಸಿ ಯಲ್ಲಿ ರುಬ್ಬಿದ ಮಿಶ್ರಣ, ಬೆಂದ ತರಕಾರಿಗಳು, ಪಾಲಕ್ ಪೇಸ್ಟ್, ಎಲ್ಲವನ್ನು ಹಾಕಿ, ಉಪ್ಪು, ಬೇಕಿದ್ದಲ್ಲಿ ಸ್ವಲ್ಪ ಬೆಲ್ಲ ಹಾಕಿ ಚೆನ್ನಾಗಿ ಕುದಿಸಿದರೆ, ಪಾಲಕ್ ಸೊಪ್ಪಿನ ಸಾಗು ರೆಡಿ ಆಗುತ್ತದೆ.. ಕಡೆಯಲ್ಲಿ ಒಗ್ಗರಣೆ ಕೊಡಬಹುದು…
        Now, to a broad pan, add boiled veggies, ground paste, palak puree/paste, salt, little jaggery[optional] and boil well.. Lastly give seasoning of mustard+oil..

IMG_20191104_115457

[2] Palak Paratha recipe(ಪಾಲಾಕ್ ಪರೋಟ ಮಾಡುವ ವಿಧಾನ)

You can click here –> Palak paratha recipe

PalakParatha

[3] Palak Poori recipe(ಪಾಲಾಕ್ ಪೂರಿ ಮಾಡುವ ವಿಧಾನ)

Follow the same recipe of Palak paratha, but make a stiff/thick dough.. And deep fry in hot oil on both the sides.. You can fry based on your preferences.. In our home, we want it to be roasted properly until light brown…

ಪಾಲಕ್ ಪೂರಿ ಮಾಡುವ ವಿಧಾನ ಸಹ ಪರಾಟ ಮಾಡಿದಂತೆಯೇ.. ಆದರೆ ಕಲಸಿಕೊಂಡ ಹಿಟ್ಟು ಗಟ್ಟಿಯಾಗಿರಬೇಕು.. ಹಾಗೂ ಕಾದ ಎಣ್ಣೆಯಲ್ಲಿ ಎರಡೂ ಬದಿ ಹೊಂಬಣ್ಣ ಬರುವಂತೆ ಕರೆಯಬೇಕು.. ಕೆಲವರಿಗೆ ಹಸಿರಾಗಿಯೇ ಇರಬೇಕೆಂದರೆ, ಪೂರಿಯನ್ನು ಬೇಗ ಎರಡೂ ಬದಿ ಬೇಯಿಸಿ, ತೆಗೆದುಬಿಡಬೇಕು..

IMG_20200110_093545

IMG_20200110_093704

[4] Palak dal or Palak Tovve recipe (ಪಾಲಾಕ್ ದಾಲ್ ಮಾಡುವ ವಿಧಾನ)

ಮೊದಲಿಗೆ ಅರ್ಧ ಕಪ್ ಹೆಸರುಬೇಳೆಯೊಂದಿಗೆ , ತೊಳೆದು ಹೆಚ್ಚಿಟ್ಟುಕೊಂಡ ಪಾಲಕ್ ಸೊಪ್ಪನ್ನು(ಒಂದರಿಂದ ಎರಡು ಕಟ್ಟು ) ಬೇಯಿಸಿಕೊಳ್ಳಿ…

ನಂತರ, ಒಂದು ಬಾಣಲೆಗೆ, ಎರಡು ಚಮಚ ಎಣ್ಣೆ, ಸಾಸಿವೆ, ಜೀರಿಗೆ, ಸಿಡಿಸಿ, ಒಂದೊಂದು ಚಮಚ ಕಡಲೆಬೇಳೆ, ಉದ್ದಿನಬೇಳೆ ಹಾಕಿ ಹುರಿದು, ಅರ್ಧ ಚಮಚ ಅರಿಶಿನ ಹಾಕಿ, ಮೂರು ಹೆಚ್ಚ್ಚಿದ ಹಸಿಮೆಣಸಿನಕಾಯಿ ಹಾಕಿ ಹುರಿದು, ಸ್ವಲ್ಪ ಶುಂಠಿ, ಇಂಗು ಹಾಕಿ , ಬೇಯಿಸಿದ ಹೆಸರುಬೇಳೆ+ಸೊಪ್ಪಿನ ಮಿಶ್ರಣ ಹಾಕಿ, ಸ್ವಲ್ಪ ಉಪ್ಪು, ಬೇಕಿದ್ದಲ್ಲಿ ಒಂದು ಚಮಚ ಅಚ್ಚಖಾರದ ಪುಡಿ[ಹಸಿಮೆಣಸಿನ ಖಾರವೇ ಸಾಕಾದರೆ ಪುಡಿ ಬೇಡ ], ಸ್ವಲ್ಪ ಬೆಲ್ಲ ಹಾಕಿ, ಚೆನ್ನಾಗಿ ಕುದಿಸಿದರೆ ಪಾಲಕ್ ಸೊಪ್ಪಿನ ತೊವ್ವೆ/ ದಾಲ್ ಸಿದ್ಧವಾಗುತ್ತದೆ. ಇದು ಚಪಾತಿಯೊಂದಿಗೆ / ಅನ್ನದೊಂದಿಗೆ ಹೊಂದುತ್ತದೆ..

IMG_20200131_153246

ಬೇಕಾದಲ್ಲಿ ಹೆಸರುಬೇಳೆ ಬದಲಿಗೆ ಕೇವಲ ತೊಗರಿಬೇಳೆ, ಅಥವಾ, ಎರಡೂ ಬೇಳೆಗಳ ಸಮ ಪ್ರಮಾಣ ಬೇಯಿಸಿ ಉಪಯೋಗಿಸಬಹುದು..

IMG_20200131_172123

 

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.