Ragi Masala/Open Masala Dosa Recipe(ರಾಗಿ ಮಸಾಲೆ ದೋಸೆ ಮಾಡುವ ವಿಧಾನ)

ನಮಸ್ಕಾರ ಓದುಗರಿಗೆ… ಇವತ್ತು ಭಾನುವಾರ ರಜಾ ದಿನವಾದ್ದರಿಂದ, ಏನಾದರೂ ಹೊಸದಾಗಿ ಮಾಡೋಣ ಎಂದುಕೊಂಡು, ಈ ರಾಗಿ ಮಸಾಲೆ ದೋಸೆ ಪ್ರಯತ್ನಿಸಿ, ಅದರ ಮಾಡುವ ವಿಧಾನ ಕೆಳಗಡೆ ವಿವರಿಸಿದ್ದೇನೆ…

ನೀವು ಒಮ್ಮೆ ಪ್ರಯತ್ನಿಸಿ, ಹೇಗಿತ್ತೆಂದು ತಿಳಿಸಿ… ನಾನು ನನ್ನ ಬ್ಲಾಗ್ನಲ್ಲಿ ಈಗಾಗಲೇ ಮೂರು ನಾಲ್ಕು ತರಹದ ರಾಗಿಯಿಂದ ಮಾಡಬಹುದಾದ ರೊಟ್ಟಿ, ದೋಸೆ, ಪಡ್ಡು, ಉತ್ತಪ್ಪ ಇವುಗಳ ವಿಧಾನಗಳನ್ನು ಪೋಸ್ಟ್ ಮಾಡಿದ್ದೀನಿ… ಅದೇ ಸಾಲಿಗೆ ಈ ಪೋಸ್ಟ್ ಸಹ ಸೇರುತ್ತದೆ…

IMG_20200216_094115

ಬೇಕಾದ ಪದಾರ್ಥಗಳು ಹಾಗೂ ಮಾಡುವ ವಿಧಾನ:-

ಉದ್ದಿನ ಬೇಳೆ Urad dal – ಅರ್ಧ ಕಪ್
ಅವಲಕ್ಕಿ Poha – ಅರ್ಧ ಕಪ್
ಮೆಂತ್ಯ Methi seeds- ಒಂದು ಸ್ಪೂನ್
ರಾಗಿ ಹಿಟ್ಟು Ragi flour- ಎರಡು ಕಪ್
ಅಕ್ಕಿ ಹಿಟ್ಟು Rice flour – ಎರಡು ಸ್ಪೂನ್

ಮೊದಲಿಗೆ ಉದ್ದಿನಬೇಳೆ, ಅವಲಕ್ಕಿ, ಮೆಂತ್ಯ ಇವುಗಳನ್ನು ನಾಲ್ಕು ಗಂಟೆ ನೆನಸಿ ಇಡಿ..

ನಂತರ ನುಣ್ಣಗೆ ರುಬ್ಬಿಕೊಳ್ಳಿ… ಅದಕ್ಕೆ ರಾಗಿ ಹಿಟ್ಟು, ಅಕ್ಕಿ ಹಿಟ್ಟು ಸೇರಿಸಿ… ಚೆನ್ನಾಗಿ ಕಲಸಿ,ಬೇಕಿದ್ದಲ್ಲಿ ಸ್ವಲ್ಪ ಮೇಲೆ ನೀರು ಹಾಕಿಕೊಳ್ಳಿ… ಎರಡು ಗಂಟೆ ಬಿಟ್ಟು, ಕಾದ ಕಾವಲಿಯ ಮೇಲೆ, ತೆಳ್ಳಗೆ ದೋಸೆ ಮಾಡಿ, ಮಧ್ಯದಲ್ಲಿ ಚಟ್ನಿ ಪುಡಿ ಉದುರಿಸಿ, ಹರಡಿ, ಅದರ ಮೇಲೆ, ಆಲೂಗಡ್ಡೆ ಪಲ್ಯ ಇಟ್ಟು, ಹರಡಿ, ದೋಸೆಯನ್ನು ಮಡಿಸಿ, ಚಟ್ನಿಯೊಂದಿಗೆ ಬಡಿಸಿ…

PudinaChutney

ಇದಕ್ಕೆ ತುಪ್ಪ/ಬೆಣ್ಣೆ/ಅಡುಗೆ ಎಣ್ಣೆ ಯಾವುದು ಬೇಕಾದರೂ ಉಪಯೋಗಿಸಬಹುದು… ಆದರೆ ಧಾರಾಳವಾಗಿ ಉಪಯೋಗಿಸಬೇಕಾಗುತ್ತದೆ.. ಆಗ ದೋಸೆ ತುಂಬಾ ಚೆನ್ನಾಗಿ ಗರಿ ಗರಿಯಾಗಿ ಬರುತ್ತದೆ…

ನೀವು ಬೇಕಾದರೆ ಕೆಂಪು ಚಟ್ನಿ ಉಪಯೋಗಿಸಬಹುದು… ನಾನು ಚಟ್ನಿ ಪುಡಿ ಉಪಯೋಗಿಸಿದ್ದೀನಿ… ಚಟ್ನಿ ಪುಡಿ ಮಾಡುವ ವಿಧಾನವನ್ನು ಸದ್ಯದಲ್ಲೆ ಪೋಸ್ಟ್ ಮಾಡುತ್ತೀನಿ…

ರಾಗಿ ಕಾಳು ಉಪಯೋಗಿಸುತ್ತಿದ್ದರೆ, ಒಂದು ಕಪ್ ಅಷ್ಟು ಕಾಳನ್ನು ಐದಾರು ಗಂಟೆ ಬೇರೆಯಾಗಿ ನೆನಸಿ, ಎರಡು ಮೂರು ಸಲ ಬೇರೆಯಾಗಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ… ನಂತರ ಮಿಕ್ಸಿ ಮಾಡಿದ ಬೇಳೆಗೆ ಸೇರಿಸಬಹುದು….

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.