Lemon Pickle Recipe 🍋 (ನಿಂಬೆಕಾಯಿ ಉಪ್ಪಿನಕಾಯಿ ಮಾಡುವ ವಿಧಾನ)

ನಮಸ್ಕಾರ ಓದುಗರಿಗೆ…

**ಊಟದ ಜೊತೆಯಲ್ಲಿ ಉಪ್ಪಿನಕಾಯಿ**  ಅನ್ನುವ ಹಾಗೆ, ತಿಳಿ ಸಾರು ಅನ್ನ, ಮೊಸರನ್ನ, ಪರೋಟ ಇವುಗಳ ಜೊತೆಯಲ್ಲಿ ಉಪ್ಪಿನಕಾಯಿ ಇದ್ದರೆ ಅಷ್ಟೇ ಸಾಕು, ಊಟ ರುಚಿಕರ ಎನಿಸಲು…

Pickle makes an excellent accompaniment with our Indian cuisines, be it for rice/curd rice/ rice rasam/ parathas…

IMG_20200219_163200

ಇವತ್ತು ನಾವು ಪಾರಂಪರಿಕ “ನಿಂಬೆಕಾಯಿ ಉಪ್ಪಿನಕಾಯಿ” ಮನೆಯಲ್ಲಿ ಹೇಗೆ ಮಾಡುತ್ತೇವೆ ಎಂಬುದನ್ನು ನೋಡೋಣ.. ಇದು ನಮ್ಮ ಅಜ್ಜಿ ಮಾಡುವ ವಿಧಾನ…

Today let’s see how to make lemon pickle.. This is my grandmom’s recipe..

IMG_20200205_111518

ಬೇಕಾದ ಸಾಮಗ್ರಿಗಳು ಹೀಗಿವೆ

ನಿಂಬೆಕಾಯಿ ( Lemons) – 10
ಕಲ್ಲುಪ್ಪು (Crystal Salt) – ಒಂದು ಸಣ್ಣ ಕಪ್ ಅಥವಾ ಕಾಲು ಭಾಗದಷ್ಟು (ದೊಡ್ಡ ಕಪ್ ಆಗಿದ್ದರೆ)
ಅಚ್ಚ ಖಾರದ ಪುಡಿ( Red chilli powder) – ಐದಾರು ಚಮಚ , 5 to 6 tspns
ಮೆಂತ್ಯ(Methi seeds) – ಒಂದು ಟೀ ಚಮಚ ಹುರಿದು ಪುಡಿ ಮಾಡಿದ್ದು, roasted and powdered.

ಒಗ್ಗರಣೆಗೆ/ Seasoning

ಸ್ವಲ್ಪ ಎಣ್ಣೆ, ಅರ್ಧ ಚಮಚ ಸಾಸಿವೆ, ಇಂಗು ಚಿಟಿಕೆ

Method

ಮೊದಲಿಗೆ, ನಿಂಬೆಕಾಯಿಗಳನ್ನು ಚೆನ್ನಾಗಿ ತೊಳೆದು, ಒಣಗಿಸಿ ಇಡಿ… ಒಂದು ನಿಂಬೆಕಾಯಿ ಯಲ್ಲಿ ಎಂಟು ಹೊಳಾಗುವಂತೆ ಕತ್ತರಿಸಿ, ಒಂದು ಪಾತ್ರೆಗೆ ಹಾಕಿ… ಅದಕ್ಕೆ ಕಲ್ಲುಪ್ಪು , ಸ್ವಲ್ಪ ಅರಿಶಿನ ಬೆರೆಸಿ, ಮಿಕ್ಸ್ ಮಾಡಿ… ಈ ಮಿಶ್ರಣವನ್ನು ಒಂದು ಡಬ್ಬಿಗೆ ಹಾಕಿಡಿ…

First wash and dry lemons with a cotton cloth…Now make 8 pieces from each lemon… Take it in a broad bowl, add salt, little turmeric , mix and keep aside…

ಇದನ್ನು ಪ್ರತಿದಿನ ಯಾವುದಾದರೂ ಒಣಗಿದ ಚಮಚದ ಸಹಾಯದಿಂದ ಕೆದಕಿ ಇಡಿ… ಹೀಗೆ ಮಾಡಿ, ಒಂದು ವಾರ ಅಥವಾ ಹತ್ತು ದಿನಗಳು ಕಳೆದ ನಂತರ, ನಿಂಬೆಕಾಯಿ ಮೆತ್ತಗೆ ಆಗುತ್ತದೆ… ಆಗ, ಹುರಿದು ಪುಡಿ ಮಾಡಿದ ಮೆಂತ್ಯ ಪುಡಿ, ಅಚ್ಚ ಖಾರದ ಪುಡಿ ಬೆರೆಸಿ, ಮಿಕ್ಸ್ ಮಾಡಿ… ಈ ಮಿಶ್ರಣಕ್ಕೆ ಸ್ವಲ್ಪ ನೀರು ಸಹ ತಾಗಬಾರದು…

Mix and stir the mixture everyday with a dry spoon… Once it turns soft after 8 to 10 days, add Methi powder and red chilli powder, mix well…

ಒಗ್ಗರಣೆ ಮಾಡಿಕೊಂಡು, ಪೂರ್ತಿ ತಣ್ಣ ಗಾದ ಮೇಲೆ ಬೆರೆಸಿ… ಇದು 2 ರಿಂದ ಮೂರ್ನಾಲ್ಕು ತಿಂಗಳುಗಳ ಕಾಲ ಕೆಡದೇ ಇರುತ್ತದೆ… ಗಾಳಿಯಾಡದ ಜಾಡಿ ಅಥವಾ ಡಬ್ಬಿಯಲ್ಲಿ ಇಟ್ಟು ಉಪಯೋಗಿಸಿ…

Make a seasoning of Hing and mustard, cool well and mix it to lemon pickle… Store the pickle in air tight boxes and always use dry spoons while serving…

Below is a big jar full of pickles prepared and sent by my grandmom recently…

IMG_20200312_141035

 

ಮಾಡಿ ನೋಡಿ ಹೇಗಿತ್ತೆಂದು ತಿಳಿಸಿರಿ… ನೀವು ಬೇರೆ ಬೇರೆ ವಿಧಾನದಲ್ಲಿ ಉಪ್ಪಿನಕಾಯಿ ಮಾಡುತ್ತಿದ್ದರೆ, ಕೆಳಗೆ ಕಮೆಂಟ್ ಮಾಡಿ.. !!?

Do try and let me know your feedback/ if you follow any other method for making pickles….. !!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.