3 Types Of Dal Salad/Kosambari Recipes( ಮೂರು ವಿಧದ ಕೋಸಂಬರಿಗಳನ್ನು ಮಾಡುವ ವಿಧಾನ)

ಹಬ್ಬದ ಅಡುಗೆ ಎಂದಮೇಲೆ ಎಲೆ ಕೊನೆ ತುದಿಗೆ ಕೋಸಂಬರಿ ಇರುತ್ತದೆ… ವಿಧ ವಿಧವಾದ ಕೋಸಂಬರಿಗಳನ್ನು ಹೇಗೆ ಮಾಡಬಹುದು ಎಂಬುದನ್ನು ನೋಡೋಣ…

IMG_20200328_184720

ಮೊದಲಿಗೆ, ಹೆಸರುಬೇಳೆ ಕೋಸಂಬರಿ:-

ಒಂದು ಕಪ್ ಹೆಸರುಬೇಳೆಯನ್ನು ತೊಳೆದು, ಎರಡು ಗಂಟೆಗಳ ಕಾಲ ನೆನಸಿ ಇಡಿ…

IMG_20200422_191200

ನಂತರ ನೀರನ್ನು ಬಸಿದು, ಅದಕ್ಕೆ ಒಂದು ಕಪ್ ಕ್ಯಾರಟ್ ತುರಿ, ನಾಲ್ಕು ಚಮಚ ಹಸಿ ಕಾಯಿತುರಿ, ಕೊತ್ತಂಬರಿ ಸೊಪ್ಪು ಹೆಚ್ಚಿದ್ದು, ಸೇರಿಸಿ, ಒಗ್ಗರಣೆ ಕೊಡಿ…

ಒಗ್ಗರಣೆಗೆ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಸಾಸಿವೆ ಸಿಡಿಸಿ, ಸ್ವಲ್ಪ ಇಂಗು, ಒಂದೆರಡು ಹೆಚ್ಚಿದ ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ…

ಕೋಸಂಬರಿಗೆ ಉಪ್ಪನ್ನು ಹಾಗೂ ಸ್ವಲ್ಪ ನಿಂಬೆ ರಸ ಅರ್ಧ ಹೋಳು, ಕಡೆಯಲ್ಲಿ ಸೇರಿಸಿ, ಬಡಿಸಿ…

IMG_20200325_184651

ಹೆಸರುಕಾಳಿನ ಕೋಸಂಬರಿ

ಒಂದು ಕಪ್ ಹೆಸರುಕಾಳು , ತೊಳೆದು ನೆನಸಿ ಇಡಿ… ಎಂಟು ಗಂಟೆಗಳ ಕಾಲ ನೆನಸಿ, ನೀರನ್ನು ಬಸಿಯಿರಿ…

ಈಗ ಈ ಕಾಳಿಗೆ, ಒಂದು ಕಪ್ ತುರಿದ ಕ್ಯಾರೆಟ್, ನಾಲ್ಕು ಚಮಚ ಕಾಯಿ ತುರಿ, ಕೊತ್ತಂಬರಿ ಸೊಪ್ಪು ಹೆಚ್ಚಿದ್ದು ಸೇರಿಸಿ…

ನಂತರ ಸಾಸಿವೆ, ಹಸಿಮೆಣಸಿನಕಾಯಿ, ಇಂಗಿನ ಒಗ್ಗರಣೆ ಕೊಡಿ… ಕಡೆಯಲ್ಲಿ ಉಪ್ಪು , ಸ್ವಲ್ಪ ನಿಂಬೆ ರಸ ಅರ್ಧ ಹೋಳಿನಷ್ಟು, ಸೇರಿಸಿ, ಬಡಿಸಿ…

(1) ಹೆಸರುಕಾಳಿನ ಬದಲಿಗೆ, ಮೊಳಕೆ ಬರಿಸಿದ ಹೆಸರುಕಾಳು ಉಪಯೋಗಿಸಬಹುದು…

(2)ಕ್ಯಾರಟ್ ತುರಿ, ಜೊತೆಗೆ ಸಣ್ಣಗೆ ಹೆಚ್ಚಿದ ಸೌತೆಕಾಯಿ (ಚಿಕ್ಕ ಸೈಜ್) ಸೇರಿಸಬಹುದು..

(3)ಹೆಸರುಕಾಳಿನ ಕೋಸಂಬರಿಗೆ, ದಾಳಿಂಬೆ ಬೀಜ ಸೇರಿಸಿದರೆ ಸರಿಯಾಗಿ ಹೊಂದುತ್ತದೆ…

(4) ಮಾವಿನಕಾಯಿ ಕಾಲದಲ್ಲಿ, ಸಣ್ಣಗೆ ಹೆಚ್ಚಿದ ಮಾವಿನಕಾಯಿ ಸೇರಿಸಿದರೆ ಬಹಳ ರುಚಿಯಾಗಿರುತ್ತದೆ… ಆಗ ನಿಂಬೆ ರಸ ಹಾಕುವುದು ಬೇಕಿರುವುದಿಲ್ಲ….

ಕಡಲೆಬೇಳೆ ಕೋಸಂಬರಿ

ಇದರ ವಿಧಾನ ಕೂಡ ಹೆಸರು ಬೇಳೆ ಕೋಸಂಬರಿ ರೀತಿಯಲ್ಲೇ… ಎರಡು ಗಂಟೆಗಳ ಕಾಲ ನೆನಸಿ, ಕಾಯಿ ತುರಿ, ಕೊತ್ತಂಬರಿ ಸೊಪ್ಪು ಸೇರಿಸಿ, ಕ್ಯಾರಟ್ ತುರಿ ಅಥವಾ ಸೌತೆಕಾಯಿ ಹೆಚ್ಚಿದ್ದು ಸೇರಿಸಿ, ಉಪ್ಪು ಹಾಕಿ, ಒಗ್ಗರಣೆ ಕೊಡುವುದು….

IMG_20200328_184649

ಒಗ್ಗರಣೆ ಕೊಟ್ಟು ಮಿಶ್ರಣ ಮಾಡಿದ ನಂತರ ಈ ರೀತಿ ಕಾಣುತ್ತದೆ:-

IMG_20200328_184745

#StayHome
#StaySafe
#IndiaFightsAgainstCorona
#CovidEndingSoon

2 thoughts on “3 Types Of Dal Salad/Kosambari Recipes( ಮೂರು ವಿಧದ ಕೋಸಂಬರಿಗಳನ್ನು ಮಾಡುವ ವಿಧಾನ)

  1. Pingback: Shree Ramanavami (ಶ್ರೀರಾಮನವಮಿ ಆಚರಣೆ) | Life is Marvellous – ಸುಂದರ ಜೀವನ

  2. Pingback: Tadige Gowri Vratha(ತದಿಗೆ ಗೌರಿ ವ್ರತ) | Life is Marvellous – ಸುಂದರ ಜೀವನ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.