3 Easy Snack Recipes For Kids (3 ಬಗೆಯ ಸುಲಭದ ಸಂಜೆ ತಿಂಡಿಗಳ ವಿಧಾನ)

#StayHome
#StaySafe
#CovidEndingSoon

ರಜಾ ದಿನಗಳಲ್ಲಿ, ಅಥವಾ ಸಂಜೆಯ ಸಮಯಕ್ಕೆ ಮಕ್ಕಳು ತಿಂಡಿಗಳನ್ನು ಕೇಳುವುದು ಸಾಮಾನ್ಯ. ಅದರಲ್ಲೂ ಈಗಿನ ಲಾಕ್ ಡೌನ್ ಸಮಯದಲ್ಲಿ ನಾವು ಎಲ್ಲೂ ಹೊರಗಡೆಗೆ ಹೋಗುವ ಸ್ಥಿತಿಯಲ್ಲಿ ಇಲ್ಲ…. 

ಮನೆಯಲ್ಲೇ ಇರುವ ಅಥವಾ ಬೇಗನೆ ಸಿಗುವ ಕೆಲ ಸಾಮಗ್ರಿಗಳಲ್ಲಿ ರುಚಿಕರವಾಗಿ ಮಾಡಿಕೊಳ್ಳಬಹುದಾದ ಸುಲಭ ತಿಂಡಿಗಳ ರೆಸಿಪಿ ಇಲ್ಲಿದೆ. ನೀವು ಮಾಡುವ ಸ್ನಾಕ್ಸ್ ಗಳ ಜೊತೆಗೆ ಈ ಕೆಲವು ತಿಂಡಿಗಳನ್ನು ಸೇರಿಸಿಕೊಳ್ಳಿ ಹಾಗೂ ಹೇಗೆ ಇತ್ತೆಂದು ತಿಳಿಸಲು ಮರೆಯದಿಿರಿ.. 🙂

You can add the below 3 snack recipes, to your list of already-known snacks… Do try and let me know, these are easy to prepare and kids like them for sure..

(1) Puffed rice snack(ಕಡಲೆ ಪುರಿ ಒಗ್ಗರಣೆ)

ಒಂದು ದೊಡ್ಡ ಬೇಸನ್ನಲ್ಲಿ ಬೆಂಗಳೂರು ಕಡಲೇಪುರಿ ಹಾಕಿ ಸ್ವಲ್ಪ ಕ್ಲೀನ್ ಮಾಡಿಕೊಳ್ಳಿ…

ಒಂದು ಬಾಣಲೆಯಲ್ಲಿ, ಸ್ವಲ್ಪ ಎಣ್ಣೆ ಹಾಕಿ, ಸಾಸುವೆ ಒಂದು ಚಮಚ ಸಿಡಿಸಿದ ನಂತರ, ಅದಕ್ಕೆ ಒಂದರಿಂದ ಎರಡು ಹಿಡಿ ಕಡಲೆಬೀಜ, ಹಾಕಿ ಹುರಿದು, ಎರಡು, ಮೂರು ಕೆಂಪು ಮೆಣಸಿನಕಾಯಿ, ಒಂದು ಚಮಚ ಅರಿಶಿಣ ಹಾಗೂ ಒಂದು ಚಮಚ ಅಚ್ಚ ಖಾರದ ಪುಡಿ ಹಾಕಿ, ಹುರಿದು, ಸ್ವಲ್ಪ ಉಪ್ಪು, ಸ್ವಲ್ಪ ಇಂಗು ಹಾಕಿ,ನಂತರ ಒಂದು ಸಣ್ಣ ಕಪ್ ಹುರಿಗಡಲೆ, ಸಣ್ಣಗೆ ಹೆಚ್ಚಿದ ಒಣಕೊಬ್ಬರಿ ಅರ್ಧ ಕಪ್ ಹಾಕಿ, ಮಿಶ್ರಣ ಆರಿದ ಮೇಲೆ, ಕಡಲೇಪುರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಟೀ ಅಥವಾ ಕಾಫಿ ಜೊತೆಗೆ ಸವಿಯಿರಿ…

In a broad vessel , take a heap of Bangalore kadalepuri(murmura/puffed rice) , clean and keep aside..

Now in a pan, heat oil, splutter mustard, two big spoons of groundnuts, fry , add two red chillies , a tspn of red chilli powder, pinch of salt and turmeric, one small cup of fried gram, half cup of dry coconut cut pieces, little hing.. allow it to cool .. lastly pour on to the puffed rice , mix well and serve with tea or coffee..

1581685609602_1174011590_IMG_20200214_183643.jpg

(2) French Fries/Alu Finger Chips Recipe(ಸುಲಭವಾಗಿ ಫಿಂಗರ್ ಚಿಪ್ಸ್ ಮಾಡುವ ವಿಧಾನ)

ಮೊದಲಿಗೆ ಮೂರ್ನಾಲ್ಕು ಆಲೂಗಡ್ಡೆಗಳನ್ನು ತೆಗೆದುಕೊಂಡು, ತೊಳೆದುಕೊಂಡು, ಸಿಪ್ಪೆ ತೆಗೆದು, ಉದ್ದುದ್ದ ಹೆಚ್ಚಿ ಇಡಿ… ನಂತರ ಒಂದು ಅರ್ಧ ಗಂಟೆಗಳ ಕಾಲ ಬಿಸಿ ನೀರಿನಲ್ಲಿ ನೆನಸಿ, ಒಣಗಿಸಿ, ಒಂದು ಗಂಟೆಗಳ ಕಾಲ ಫ್ರೀಜೆರ್ ನಲ್ಲಿರಿಸಿ, ಹೊರಗಡೆ ತೆಗೆದು, ಕಾದ ಎಣ್ಣೆಯಲ್ಲಿ ಸ್ವಲ್ಪ ಹೊಂಬಣ್ಣ ಬರುವವರೆಗೂ ಕರಿಯಿರಿ. ತಲಾ ಅರ್ಧರ್ಧ ಚಮಚ ಉಪ್ಪು ಮತ್ತು ಅಚ್ಚ ಖಾರದ ಪುಡಿ ಸಿಂಪಡಿಸಿ.. ನಂತರ ಕೆಚಪ್ ಅಥವಾ ಚಟ್ನಿಯೊಂದಿಗೆ ಸವಿಯಿರಿ….

IMG_20200331_133259

Wash and peel 3 to 4 potatoes… Cut into vertical slices… Soak in hot water for half an hour.. Later drain water and dry .. Keep sliced potatoes in freezer for an hour or so… Take out and deep fry in hot oil, until slightly golden brown.. Drain extra oil and sprinkle a mixture of red chilli powder and salt(half tspns each)… Serve with ketchup or chutney..

IMG_20200331_120857

3. Alu Cutlet Recipe( ಆಲೂಗಡ್ಡೆ ಕಟ್ಲೆಟ್ ಮಾಡುವ ವಿಧಾನ ಹೀಗಿದೆ)

ನಾಲ್ಕು ಆಲೂಗಡ್ಡೆಯನ್ನು ಬೇಯಿಸಿ… ಸಿಪ್ಪೆ ತೆಗೆದು, ಮಸೆದು ಇಟ್ಟುಕೊಳ್ಳಿ…

ನಂತರ ಅದಕ್ಕೆ ತಲಾ ಎರಡು ದೊಡ್ಡ ಚಮಚ ಕಡಲೆಹಿಟ್ಟು, ಹಾಗೂ ಸಣ್ಣ ರವೆ ಹಾಕಿ, ಉಪ್ಪು, ಚಿಟಿಕೆ ಅರಿಶಿನ, ಒಂದು ಟೀ ಚಮಚ ಅಚ್ಚ ಖಾರದ ಪುಡಿ, ಒಂದು ಟೀ ಚಮಚ ಚಾಟ್ ಮಸಾಲ ಪುಡಿ, ಅರ್ಧ ಚಮಚ ಧನಿಯಾ ಪುಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಒಂದು ಹೆಚ್ಚಿದ ಈರುಳ್ಳಿ, ಒಂದು ಹೆಚ್ಚಿದ ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ…. ನೀರು ಹಾಕುವ ಅವಶ್ಯಕತೆ ಇಲ್ಲ.. ನಂತರ ಅಂಬೋಡೆಯಂತೆ   ಸ್ವಲ್ಪ ಸ್ವಲ್ಪ ಉಂಡೆಗಳನ್ನು ತೆಗೆದುಕೊಂಡು, ಅಂಬೋಡೆ ರೀತಿಯಲ್ಲಿ ತಟ್ಟಿ, ಕಾದ ಎಣ್ಣೆಯಲ್ಲಿ ಕರಿಯಿರಿ.. ಅಥವಾ ನಾನು ಮಾಡಿದ ಹಾಗೆ ತವಾದ ಮೇಲೆ ಸ್ವಲ್ಪ ಎಣ್ಣೆ ಹಾಕಿ , ರೋಸ್ಟ್ ಮಾಡಿ… (Shallow fry)…

ನಂತರ ಕೆಚಪ್ ಅಥವಾ ಚಟ್ನಿಯೊಂದಿಗೆ ಸವಿಯಿರಿ…

First take 4 to 5 potatoes, boil, peel and mash… Keep aside to cool..

Now add one chopped onion, two big spoons each of Gram Flour and Sooji Rawa, little salt and little turmeric.. Now add half tspnful each of chat masala powder, one spoonful Red chilli powder, one slit Green chilli, little Coriander, half tspn of Dhaniya powder, mix well to a dough, don’t add any water ( just sprinkle if needed ).

Make small rounds of dough  into patties and either you can deep fry or shallow fry with few drops of oil.. I shallow fried by placing patties as shown below… Serve with chutney or ketchup…

Do let me know if this post was useful!! :-).

IMG_20200331_184045

2 thoughts on “3 Easy Snack Recipes For Kids (3 ಬಗೆಯ ಸುಲಭದ ಸಂಜೆ ತಿಂಡಿಗಳ ವಿಧಾನ)

  1. Pingback: Green Peas/Mixed Gram Cutlet Recipe( ಬಟಾಣಿ/ಮಿಶ್ರ ಕಾಳುಗಳ ಕಟ್ಲೇಟ್ ಮಾಡುವ ವಿಧಾನ) | Life is Marvellous – ಸುಂದರ ಜೀವನ

  2. Pingback: Green Peas/Mixed Gram Cutlet Recipe( ಬಟಾಣಿ/ಮಿಶ್ರ ಕಾಳುಗಳ ಕಟ್ಲೇಟ್ ಮಾಡುವ ವಿಧಾನ) | Life is Marvellous – ಸುಂದರ ಜೀವನ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.