TiLimugila Tottilali Lyrics (ತಿಳಿಮುಗಿಲ ತೊಟ್ಟಿಲಲ್ಲಿ ಸಾಹಿತ್ಯ)

In the below post I have provided lyrics of a Lullaby/Poem TiLimugila Tottilali… This poem, also comes under Bhavageethe (A form of Poetry) category….

ಈ ಕೆಳಗಿನ ಪದ್ಯ ನಮಗೆ ಪಠ್ಯಪುಸ್ತಕದಲ್ಲಿ ಇತ್ತು… ಯಾವ ತರಗತಿಯಲ್ಲಿ ಇತ್ತು, ಎಂಬುದು ಜ್ಞಾಪಕ ಇಲ್ಲ… ನಿಮಗೆ ಗೊತ್ತಿದ್ದರೆ ಕಮೆಂಟ್ ಮಾಡಿ….

ಹಾಗೇ, ಅಕ್ಷರ ಅಥವಾ ಪದ ಲೋಪ ಕಂಡುಬಂದಲ್ಲಿ ತಿಳಿಸಿ… ಪೋಸ್ಟ್ ಎಡಿಟ್ ಮಾಡುತ್ತೇನೆ…

ಈ ಪದ್ಯ ಜೋಗುಳ ಹಾಡೂ ಸಹ ಆಗುತ್ತದೆ, ಅಥವಾ ಭಾವಗೀತೆಯ ಸಾಲಿಗೂ ಸೇರುತ್ತದೆ ಎಂಬುದು ನನ್ನ ಅನಿಸಿಕೆ…

********************************

ತಿಳಿಮುಗಿಲ ತೊಟ್ಟಿಲಲ್ಲಿ
ಮಲಗಿದ್ದ ಚಂದಿರನ
ಗಾಳಿ ಜೋಗುಳ ಹಾಡಿ
ತೂಗುತ್ತಿತ್ತು||

ಗರಿಮುದುರಿ ಮಲಗಿದ್ದ
ಹಕ್ಕಿ ಗೂಡುಗಳಲ್ಲಿ
ಇರುಳು ಹೊಂಗನಸೂಡಿ
ಸಾಗುತ್ತಿತ್ತು ||

ಮುಗುಳಿರುವ ಹೊದರಿನಲಿ
ನರುಗಂಪಿನುದರದಲಿ
ಜೇನುಗನಸಿನ ಹಾಡು
ಕೇಳುತ್ತಿತ್ತು ||

ತುಂಬುನೀರಿನ ಹೊಳೆಯೊಳ
ಅಂಬಿಗನ ಕಿರುದೋಣಿ
ಪ್ರಸ್ಥಾನಗೀತೆಯನು
ಹೇಳುತ್ತಿತ್ತು||

ಬರುವ ಮುಂದಿನ ದಿನದ
ನವ ನವೋದಯ ಕಾಗಿ
ಪ್ರಕೃತಿ ತಪವಿರುವಂತೆ
ತೋರುತ್ತಿತ್ತು ||

ಶಾಂತರೀತಿಯೊಳ ಇರುಳು
ಮೆಲ್ಲಮೆಲ್ಲನೆ ಉರುಳಿ
ನಾಳಿನ ಶುಭೋದಯ
ಸಾರುತ್ತಿತ್ತು ||

-ಎಸ್ ವಿ ಪರಮೇಶ್ವರ ಭಟ್ಟರು

*******************

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.